ಕೂದಲು ಆರೈಕೆಗೆ ಮಾರುಕಟ್ಟೆಗೆ ಬಂದಿದೆ ಸ್ಮಾರ್ಟ್ ಬಾಚಣಿಗೆ..!

12 Mar 2018 12:06 PM | Technology
590 Report

ಇತ್ತೀಚಿನ ದಿನದಲ್ಲಿ ಕೂದಲು ಸಮಸ್ಯೆಗಳು ವಿವಿಧ ಕಾರಣಗಳಿಂದ ಹೆಚ್ಚಾಗುತ್ತಿರುವ ಕಾರಣ, ಮಹಿಳೆಯರು ಮತ್ತು ಪುರುಷರು ಕೂದಲಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೂದಲನ್ನು ಬಾಚುವಂತಹ ಬಾಚಣಿಗೆಯನ್ನು ಸ್ಮಾರ್ಟ್ ಮಾಡುವಲ್ಲಿ ಖ್ಯಾತ ಹೇರ್ ಕೇರ್ ಸಂಸ್ಥೆ ಕೆರಾಸ್ಟೇಸ್ ಹೇರ್ ಕೋಚ್ ಯಶಸ್ವಿಯಾಗಿದೆ.

ಸ್ಮಾರ್ಟ್ ಹೇರ್ ಬ್ರಶ್: ಸ್ಮಾರ್ಟ್ ಹೇರ್ ಬ್ರಶ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಬಾಚಣಿಗೆಯೂ ಕಾಣಿಸಿಕೊಂಡಿದ್ದು, ನೀವು ತಲೆ ಬಾಚುವ ವಿಧಾನವನ್ನು ಇದು ಬದಲಾಯಿಸಲಿದೆ ಎನ್ನಲಾಗಿದೆ. ಸಾಮಾನ್ಯ ಬಾಚಣಿಗೆಯಂತೆ ಕಾಣಿಸಿಲಿದೆ. ಆದರೆ ಕೆಲಸ ಮಾತ್ರ ಸ್ಮಾರ್ಟ್ ಆಗಿ ಮಾಡಲಿದೆ.

ಆಪ್ ನೊಂದಿಗೆ ಕಾರ್ಯಚರಣೆ: ಈ ಸ್ಮಾರ್ಟ್ ಬಾಚಣೆಗೆಯನ್ನು ನಿಮ್ಮ ಸ್ಮಾರ್ಟ್ಫೋನ್ ನೊಂದಿಗೆ ಕನೆಕ್ಟ್ ಮಾಡಿಕೊಳ್ಳುವ ಸಲುವಾಗಿ ಸ್ಮಾರ್ಟ್ ಆಪ್ ವೊಂದು ಲಭ್ಯವಿದೆ. ಈ ಆಪ್ ಹಾಕಿಕೊಂಡು ತಲೆ ಬಾಚಿಕೊಂಡ ನಿಮ್ಮ ಕೂದಲಿನ ಸ್ಥಿತಿಗತಿ ನಿಮಗೆ ತಿಳಿಯಲಿದೆ.

ಆಪ್ ನೊಂದಿಗೆ ಕಾರ್ಯಚರಣೆ: ಈ ಸ್ಮಾರ್ಟ್ ಬಾಚಣೆಗೆಯನ್ನು ನಿಮ್ಮ ಸ್ಮಾರ್ಟ್ಫೋನ್ ನೊಂದಿಗೆ ಕನೆಕ್ಟ್ ಮಾಡಿಕೊಳ್ಳುವ ಸಲುವಾಗಿ ಸ್ಮಾರ್ಟ್ ಆಪ್ ವೊಂದು ಲಭ್ಯವಿದೆ. ಈ ಆಪ್ ಹಾಕಿಕೊಂಡು ತಲೆ ಬಾಚಿಕೊಂಡ ನಿಮ್ಮ ಕೂದಲಿನ ಸ್ಥಿತಿಗತಿ ನಿಮಗೆ ತಿಳಿಯಲಿದೆ.

ಟಿಪ್ಸ್ ನೀಡಲಿದೆ: ನಿಮ್ಮ ಕೂದಲು ಆಕೈಕೆಗೆ ನೀವು ಮಾಡಬೇಕಾದ ಕಾರ್ಯಗಳೇನು ಎಂಬುದರ ಕುರಿತು ಟಿಪ್ಸ್ ಗಳನ್ನು ಈ ಆಪ್ ನೀಡಲಿದೆ. ಕೂದಲಿನ ಸೌಂದರ್ಯವನ್ನು ವೃದ್ಧಿಸಲು ಏನು ಮಾಡಬಹುದು ಎಂಬ ತಿಳಿಸಿಕೊಡಲಿದೆ.

 

Edited By

Shruthi G

Reported By

Madhu shree

Comments