ಕಡಿಮೆ ಬಂಡವಾಳದಲ್ಲಿ  ಸ್ವಂತ ಉದ್ಯಮ ನಡೆಸಲು ಕೆಲವು ಟಿಪ್ಸ್ ಗಳು...!

05 Mar 2018 2:23 PM | Technology
1403 Report

ಇಂದು ಅನೇಕ ಜನರು ಸ್ವಂತ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಇಂದು ಕಡಿಮೆ ಬಂಡವಾಳದಲ್ಲಿ ಉತ್ಪಾದಿಸಬಹುದಾದ ಕೆಲವು ಉದ್ಯಮಗಳ ಬಗ್ಗೆ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

 ಒಂದು ಸಣ್ಣ ತಯಾರಿಕಾ ಉದ್ಯಮವನ್ನು ಮನೆ ಅಥವಾ ಪುಟ್ಟ ಬಾಡಿಗೆ ಸ್ಥಳದಲ್ಲಿ ಪ್ರಾರಂಭಿಸಬಹುದು. ಒಂದು ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಉಪಕರಣ ಅಥವಾ ಉತ್ಪಾದನಾ ಯಂತ್ರಗಳ ವೆಚ್ಚ ತುಂಬಾ ಕಡಿಮೆ. ಈ ತರಹದ ಉದ್ಯಮಗಳು ಬಂಡವಾಳ ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ನೀಡುತ್ತದೆಂದು ಹೇಳಲಾಗುತ್ತದೆ.

* ಮೋಂಬತ್ತಿ ತಯಾರಿಕಾ ಉದ್ಯಮವನ್ನು ಸಣ್ಣ ಪ್ರಮಾಣದ ಅರೆಕಾಲಿಕ ವ್ಯಾಪಾರವಾಗಿ ಪ್ರಾರಂಭಿಸಬಹುದು. ಮೋಂಬತ್ತಿಗಳನ್ನು ಧಾರ್ಮಿಕ ಉದ್ದೇಶ ಮತ್ತು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಪರಿಮಳ ಭರಿತ ಮೋಂಬತ್ತಿ ಹೆಚ್ಚು ಮಾರಾಟವಾಗುತ್ತಿರುವುದಲ್ಲದೆ ಅತ್ಯಂತ ಜನಪ್ರಿಯವಾಗಿದೆ. ನನ್ನ ಪ್ರಕಾರ ಮೋಂಬತ್ತಿ ತಯಾರಿಕೆಯು ಲಾಭದಾಯಕ ಸಣ್ಣ

*ಬೆಲ್ಟ್ ತಯಾರಿಕೆ: ಪ್ರಮಾಣದ ಉದ್ಯಮವಾಗಿದೆ.ಇದು ಮನೆಯಿಂದ ಪ್ರಾರಂಭ ಮಾಡಬಹುದಾದ ಮತ್ತೊಂದು ಸಣ್ಣ ಪ್ರಮಾಣದ ಉತ್ಪಾದನಾ ಉದ್ಯಮವಾಗಿದೆ. ನೀವು ಚರ್ಮ ಸಂಬಂಧಿತ ಉತ್ಪಾದನೆಗಳ ಸಮೂಹ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಅದನ್ನು ಗ್ರಾಹಕ ಅಥವಾ ಸಗಟು ವ್ಯಾಪಾರಿಗಳಿಗೆ ಮಾರಬಹುದು. ಈ ಉದ್ಯಮವನ್ನು ಪ್ರಾರಂಭಿಸುವ ಮೊದಲು ಸರಿಯಾದ ಮಾರುಕಟ್ಟೆ ಸಮೀಕ್ಷೆ ಮತ್ತು ಕಾರ್ಯ ಸಾಧ್ಯತಾ ಅಧ್ಯಯನವನ್ನು ಮಾಡಿ.

* ಇದು ಆಹಾರಕ್ಕೆ ಸಂಬಂಧಿಸಿರುವ ತಯಾರಿಕಾ ಉದ್ಯಮ. ನೀವು ಬೇಕರ್ ಆಗಿ ನಿಮ್ಮ ಸ್ವಂತ ಬ್ರೆಡ್ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಬಹುದು. ಬಿಸ್ಕತ್ತು ಇನ್ನೊಂದು ಲಾಭದಾಯಕ ಉದ್ಯಮವಾಗಿದೆ.

* ನೀವು ನಿಮ್ಮ ಸ್ವಂತ ಸಣ್ಣ ಗೃಹಾಧಾರಿತ ಬಿಸ್ಕತ್ತು ತಯಾರಿಕಾ ಉದ್ಯಮ ಅಥವಾ ಸ್ವಯಂಚಾಲಿತ ಬಿಸ್ಕತ್ತು ತಯಾರಿಕಾ ಕಾರ್ಖಾನೆಯನ್ನೂ ಕೂಡ ಸ್ಥಾಪಿಸಬಹುದು.

*  ನಿಮಗೆ ಕ್ಯಾಂಡಿ ಅಥವಾ ಚಾಕೋಲೇಟ್ ತಯಾರಿಸುವ ಆಸಕ್ತಿ ಇದ್ದರೆ ನೀವು ನಿಮ್ಮ ಸ್ವಂತ ಕ್ಯಾಂಡಿ ಅಥವಾ ಚಾಕೋಲೇಟ್ ಮಾಡಬಹುದು ಮತ್ತು ಅದನ್ನು ಮಾರಾಟ ಮಾಡಲು ಪ್ಯಾಕ್ ಮಾಡಬಹುದು.

* ಐಸ್ ಕ್ರೀಂ ವಿವಿಧ ರುಚಿ,ಬಣ್ಣ ಮತ್ತು ರೂಪಗಳಲ್ಲಿ ದೊರೆಯುತ್ತದೆ. ಈ ವ್ಯಾಪಾರವನ್ನು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ದೊಡ್ಡ ಪ್ರಮಾಣದ ವ್ಯಾಪಾರಕ್ಕಾಗಿ, ನೀವು ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

Edited By

Shruthi G

Reported By

Madhu shree

Comments