A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

'ಬ್ಲೂ ವೇಲ್' ತಡೆಯಲು ಹೊಸ ತಂತ್ರಜ್ಞಾನ ಅಳವಡಿಕೆ | Civic News

'ಬ್ಲೂ ವೇಲ್' ತಡೆಯಲು ಹೊಸ ತಂತ್ರಜ್ಞಾನ ಅಳವಡಿಕೆ

05 Feb 2018 11:02 AM | Technology
608 Report

'ಬ್ಲೂ ವೇಲ್' ಆಟ ಆಡಲು ಇಚ್ಛಿಸುವವರು, 'ಐ ವಾಂಟ್ ಟು ಪ್ಲೇ' ಅಥವಾ 'ಆಯಡ್ ಮಿ ಇಂಟು ದಿ ಗೇಮ್/ ಗ್ರೂಪ್' ಎಂದು ಸಂದೇಶ ರವಾನಿಸುತ್ತಾರೆ. ಆಟವನ್ನು ಬೇರೆಯವರಿಗೆ ‍ಪರಿಚಯಿಸುವವರು, 'ಹಾಯ್ ಫಾಲೋ ಮಿ ಇಫ್ ಯು ವಾಂಟ್ ಟು ಪ್ಲೇ' ಎಂಬ ಸಂದೇಶಗಳನ್ನು ಹರಿಬಿಡುತ್ತಾರೆ ಎಂಬುದು ತಿಳಿದುಬಂದಿದೆ' ಎಂದು ಸಂಶೋಧಕ ಪೊನ್ನುರಂಗಮ್ ಕುಮಾರಗುರು ತಿಳಿಸಿದ್ದಾರೆ.

 'ಬ್ಲೂ ವೇಲ್' ಆಟದ ಪ್ರಚೋದನೆಗೆ ಒಳಗಾಗುವವರು ಮತ್ತು ಇದರ ಸಂತ್ರಸ್ತರು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿರುತ್ತಾರೆ. ಇವರನ್ನು ಪತ್ತೆಹಚ್ಚುವುದು ಈ ಯೋಜನೆಯ ಉದ್ದೇಶ' ಎಂದು ಸಂಶೋಧಕ ಪೊನ್ನುರಂಗಮ್ ಕುಮಾರಗುರು ಹೇಳಿದ್ದಾರೆ. ಮಕ್ಕಳನ್ನು ಸಾವಿನ ಮನೆಗೆ ನೂಕುವ 'ಬ್ಲೂ ವೇಲ್' ಆಟದ ತಂತ್ರಜ್ಞಾನವನ್ನೇ ಬಳಸಿಕೊಂಡು ಅವರ ಜೀವ ರಕ್ಷಣೆ ಮಾಡುವ ಮತ್ತು ಅವರು ಆ ಆಟದಿಂದ ವಿಮುಖರಾಗುವಂತೆ ಮಾಡಲು ಹೊಸ ತಂತ್ರಜ್ಞಾನ ಕಂಡುಹಿಡಿಯುವ ಕಾರ್ಯಯೋಜನೆಯೊಂದು ನಡೆಯುತ್ತಿದೆ. ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಸಂಶೋಧಕರು ಕಳೆದ ಸೆಪ್ಟೆಂಬರ್ನಿಂದ ಈ ಕುರಿತ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.  ರಷ್ಯಾದ ಸಾಮಾಜಿಕ ಜಾಲತಾಣ 'VKontakt'ಕ್ಕೆ ಸೀಮಿತವಾಗಿದ್ದ ಬ್ಲೂ ವೇಲ್ ಆಟವು ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತಿತರ ಜನಪ್ರಿಯ ಸಾಮಾಜಿಕ ಜಾಲತಾಣಗಳಿಗೂ ಹರಡಿದೆ. ಇದನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ' ಎಂದಿದ್ದಾರೆ. 'ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಂತರ ಅದನ್ನು ಅಂತರ್ಜಾಲ ಶೋಧಯಂತ್ರದ (ಬ್ರೌಸರ್) ಜೊತೆ ಅಳವಡಿಸಬಹುದು ಅಥವಾ ಕಂಪನಿಗಳು ತಮ್ಮ ಸರ್ವರ್ನಲ್ಲಿಯೂ ಅಳವಡಿಸಬಹುದು' ಎಂದು ಹೇಳಿದ್ದಾರೆ. ಬ್ಲೂ ವೇಲ್ ಆಟಕ್ಕೆ ಅಂದಾಜು 170 ಜನ ಬಲಿಯಾಗಿದ್ದಾರೆ. ಇದರಲ್ಲಿ 10 ಮಂದಿ ಭಾರತದವರಾಗಿದ್ದಾರೆ ಎಂಬುದನ್ನು ಸಂಶೋಧನಾ ತಂಡ ಕಂಡುಕೊಂಡಿದೆ.

 

Edited By

Shruthi G

Reported By

Madhu shree

Comments