ಗ್ರಾಹಕರಿಗೆ ಖುಷಿ ಸುದ್ದಿ ನೀಡುತ್ತಿರುವ ದೇಶೀಯ ಮೆಸ್ಸೇಜಿಂಗ್ ಅಪ್ಲಿಕೇಷನ್ ಹೈಕ್..!!

18 Jan 2018 11:49 AM | Technology
318 Report

ವಾಟ್ಸ್ ಅಪ್ ಗೆ ಟಕ್ಕರ್ ನೀಡಲು ಹೈಕ್ ಈ ಮಹತ್ವದ ಸೇವೆ ಶುರುಮಾಡಿದೆ. ಇನ್ನೂ ಇಂಟರ್ನೆಟ್ ಸೇವೆ ಹೊಂದಿರದ ಜನರನ್ನು ಟಾರ್ಗೆಟ್ ಮಾಡಿರುವ ಹೈಕ್ 10 ಕೋಟಿಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದುವ ಗುರಿಯಿಟ್ಟುಕೊಂಡಿದೆ. ಹೈಕ್ ಈ ಸೇವೆ ನೀಡಲು ಏರ್ಟೆಲ್, ವೋಡಾಫೋನ್ ಮತ್ತು ಬಿ ಎಸ್ ಎನ್ ಎಲ್ ನಂತ ಗ್ರಾಮೀಣ ಜನರನ್ನು ತಲುಪುತ್ತಿರುವ ದೂರಸಂಪರ್ಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ದೇಶೀಯ ಮೆಸ್ಸೇಜಿಂಗ್ ಅಪ್ಲಿಕೇಷನ್ ಹೈಕ್, ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಗ್ರಾಹಕರಿಗಾಗಿ ಹೊಸ ಸೇವೆಯೊಂದನ್ನು ಹೈಕ್ ಶುರುಮಾಡಿದೆ. ಈ ಸೇವೆಯಲ್ಲಿ ಆಂಡ್ರಾಯ್ಡ್ ಬಳಕೆದಾರರು ಇಂಟರ್ನೆಟ್ ಡೇಟಾ ಇಲ್ಲದೆ ಸಂದೇಶ ಕಳುಹಿಸಬಹುದು. ಸುದ್ದಿ ಓದಬಹುದು. ರೈಲ್ವೆ ಟಿಕೆಟ್ ಬುಕ್ ಮಾಡಬಹುದು. ಹಣ ವರ್ಗಾವಣೆ ಮಾಡುವ ಅವಕಾಶವನ್ನು ಕೂಡ ಹೈಕ್ ನೀಡ್ತಿದೆ, ಇಂಟೆಕ್ಸ್ ಮತ್ತು ಕಾರ್ಬನ್ ಫೋನ್ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಇಂಟೆಕ್ಸ್ ಮತ್ತು ಕಾರ್ಬನ್ ಫೋನ್ ಖರೀದಿ ಮಾಡುವ, ಹೈಕ್ ವಾಲೆಟ್ ಗೆ ಸೈನ್ ಇನ್ ಆಗುವ ಗ್ರಾಹಕರಿಗೆ ಹೈಕ್ 200 ರೂಪಾಯಿ ಕ್ಯಾಶ್ಬ್ಯಾಕ್ ನೀಡಲಿದೆ.

Edited By

Shruthi G

Reported By

Madhu shree

Comments