ಆಪ್ ಮೂಲಕವೇ ಚಿಕಿತ್ಸೆ ಪಡೆದ ಮಹಿಳೆ!

21 Jul 2017 5:39 PM | Technology
634 Report

ನವದೆಹಲಿ: ತಾಂತ್ರಿಕವಾಗಿ ನಾವು ಇಂದು ಎಷ್ಟು ಮುಂದುವರಿದಿದ್ದೇವೆ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆ. ಮಕ್ಕಳಾಗದ ದಂಪತಿಗಳು ವೈದ್ಯರ ಬಳಿ ಚಿಕಿತ್ಸೆಗೆ ಬರುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಆಪ್ ಸಹಾಯದಿಂದ ಸಲಹೆ ಪಡೆದು ಇದೀಗ ಗರ್ಭಿಣಿಯಾಗಿದ್ದಾರೆ.

ಕಾಶ್ಮೀರದ ಮಹಿಳೆಯೊಬ್ಬರು ಆಪ್ ಮೂಲಕ ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ವೈದ್ಯರ ಸಲಹೆ ಪಡೆದಿದ್ದಾರೆ. ಕಳೆದ ಏಳು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿದ್ದರು. ಆದ್ರೆ ಆ್ಯಪ್ ಸಲಹೆಯಂತೆ ಈ ಮಹಿಳೆ ಗರ್ಭಿಣಿಯಾಗಿದ್ದಾರೆ. ಐವಿಎಫ್ ಚಿಕಿತ್ಸೆಗೊಳಗಾದ ಬಳಿಕವೂ ಈ ಮಹಿಳೆಗೆ ದೆಹಲಿಗೆ ಬೇಕಾದಾಗಲೆಲ್ಲಾ ಬಂದು ವೈದ್ಯರನ್ನು ಭೇಟಿಯಾಗಲು ಗುತ್ತಿರಲಿಲ್ಲ. ಆ ಕಾರಣಕ್ಕೆ ವೈದ್ಯರು ಆಕೆಗೆ ‘ಮೈ ಫಾಲೋ ಅಪ್' ಆಪ್ ಮೂಲಕ ಸ್ಮಾರ್ಟ್ ಫೋನ್ ನಿಂದೇ ಸಲಹೆ ಸೂಚನೆ ನೀಡಿದ್ದರು. ಈ ರೀತಿ ಆಪ್ ಮೂಲಕ ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಇವರು ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ಹೇಳಿಕೊಂಡಿದ್ದಾರೆ. ಹೀಗೊಂದು ಆಪ್ ಎಲ್ಲಾ ಆಂಡ್ರಾಯ್ಡ್ ಫೋನ್ ಗಳಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

 

Edited By

venki swamy

Reported By

Sudha Ujja

Comments