ಇಂಡಿಯಾದ ಅಳಿಯ ಆಗಲಿದ್ದಾರೆ ಪಾಕ್ ಕ್ರಿಕೆಟರ್..!!

01 Aug 2019 11:18 AM | Sports
328 Report

ಇಂಡಿಯಾಗೂ ಮತ್ತು ಪಾಕಿಸ್ತಾನಕ್ಕೂ ಎಣ್ಣೆ ಸೀಗೆಕಾಯಿ ಇದ್ದಂತೆ… ಇತ್ತಿಚಿಗಷ್ಟೆ ನಡೆದ ಪುಲ್ವಾಮ ದಾಳಿಯಿಂದ ಇಂಡಿಯಾ ಮತ್ತು ಪಾಕಿಸ್ತಾನದ ನಡುವೆ ಮತ್ತೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು.. ಆದರೆ ಇದೀಗ ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಹರಿಯಾಣ ಮೂಲದ ಯುವತಿಯನ್ನು ವಿವಾಹವಾಗಲಿದ್ದಾರೆ ಎಂದು ಪಾಕ್ ಮಾಧ್ಯಮವೊಂದು ಸುದ್ದಿ ಮಾಡಿದೆ.

25 ವರ್ಷದ ಹಸನ್ ಅಲಿ ಪಾಕ್ ತಂಡದ ವೇಗದ ಬೌಲರ್ ಆಗಿದ್ದಾರೆ..ಹರಿಯಾಣದ ಶಾಮಿಯಾ ಅರ್ಜೂ ಎಂಬಾಕೆಯನ್ನು ಹಸನ್ ಅಲಿ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ... ಇವರಿಬ್ಬರ ಮದುವೆಯು ಆಗಸ್ಟ್ 20 ರಂದು ದುಬೈನಲ್ಲಿ ನಡೆಯಲಿದೆ. ಶಾಮಿಯಾ ಅರ್ಜೂ ಖಾಸಗಿ ವಿಮಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಹರಿಯಾಣ ಮೂಲದವರಾದರೂ ಕೂಡ ಶಾಮಿಯಾ ಇಂಗ್ಲೆಂಡ್‍ನಲ್ಲಿ ಶಿಕ್ಷಣವನ್ನು ಪಡಿದಿದ್ದರು.. ನಂತರ ತಂದೆ ತಾಯಿಯ ಜೊತೆ ದುಬೈನಲ್ಲಿ ವಾಸಿಸುತ್ತಿದ್ದಾರೆ...ದುಬೈನಲ್ಲಿಯೇ ಗೆಳತಿಯ ಮೂಲಕ ಶಾಮಿಯಾ ಹಸನ್‍ರನ್ನ ಮೊದಲು ಭೇಟಿ ಮಾಡಿದ್ದರು ಎಂದು ಮಾಧ್ಯಮ ಸುದ್ದಿ ಮಾಡಿದೆ. ಹಸನ್ ಪಾಕ್ ಪರ 9 ಟೆಸ್ಟ್, 53 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2017ರ ಚಾಂಪಿಯನ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.. ಟೆನ್ನಿಸ್ ತಾರೆ ಪಾಕ್ ಗೆ ಸೊಸೆಯಾಗಿದ್ದರು.ಇದೀಗ ಹಸನ್ ಭಾರತದ ಅಳಿಯನಾಗುತ್ತಿದ್ಧಾರೆ

Edited By

Manjula M

Reported By

Manjula M

Comments