ಪ್ರಧಾನಿ ಮೋದಿಗೆ ಭರವಸೆ ಕೊಟ್ಟ ಹಿಮಾದಾಸ್..!!
ಸದ್ಯ ಓಟಗಾರ್ತಿ ಹಿಮಾ ದಾಸ್ ಅವರು ಭಾರತಕ್ಕೆ ಐದು ಚಿನ್ನದ ಪದಕಗಳನ್ನು ತಂದು ಕೊಟ್ಟು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.. ನಾನು ಇನ್ನೂ ಹೆಚ್ಚು ಶ್ರಮ ವಹಿಸಿ ಭಾರತಕ್ಕೆ ಕೀರ್ತಿ ಪತಾಕೆಯನ್ನು ತಂದು ಕೊಡುತ್ತೇನೆ ಎಂದು ಮೋದಿಯವರಿಗೆ ಭರವಸೆಯನ್ನು ನೀಡಿದ್ದಾರೆ. ಒಂದೇ ಒಂದು ತಿಂಗಳಲ್ಲಿ 5 ಚಿನ್ನದ ಪದಕಗಳನ್ನು ಭಾರತಕ್ಕೆ ತಂದು ಕೊಟ್ಟಿದ್ದಾರೆ ಹಿಮಾದಾಸ್.
ಕೆಲವು ದಿನಗಳಿಂದ ಹಿಮಾ ದಾಸ್ ಅವರು ಮಾಡಿದ ಅದ್ಭುತ ಸಾಧನೆಗಳ ಬಗ್ಗೆ ಭಾರತ ತುಂಬಾ ಹೆಮ್ಮೆಪಡುತ್ತದೆ. ಅವರು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರತಕ್ಕೆ ಐದು ಚಿನ್ನದ ಪದಕಗಳನ್ನು ತಂದಿದ್ದಾರೆ ಅದಕ್ಕೆ ನಮ್ಮಗೆಲ್ಲರಿಗೂ ಖುಷಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಟ್ವೀಟ್ ಪ್ರಧಾನಿ ಮೋದಿಯವರು ಮಾಡಿದ್ದರು. ಮೋದಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಹಿಮಾ ದಾಸ್ “ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ನರೇಂದ್ರ ಮೋದಿ ಸರ್. ನಾನು ಹೆಚ್ಚು ಶ್ರಮವಹಿಸಿ ಭಾರತಕ್ಕಾಗಿ ಹೆಚ್ಚಿನ ಪದಕಗಳನ್ನು ತಂದು ಕೊಡುತ್ತೇನೆ” ಎಂದು ರೀಟ್ವೀಟ್ ಮಾಡಿದ್ದಾರೆ. ಹಿಮಾದಾಸ್ ಅವರ ಈ ಸಾಧನೆಗೆ ಗಣ್ಯಾತಿ ಗಣ್ಯರು ಸಿನಿಮಾರಂಗದವರು ಎಲ್ಲಾ ಕ್ಷೇತ್ರದವರು ಕೂಡ ಶುಭಾಷಯ ಕೋರಿ ಟ್ವೀಟ್ ಮಾಡುತ್ತಿದ್ದಾರೆ.. ಹಿಮಾದಾಸ್ ಅವರನ್ನು ಗೋಲ್ಡನ್ ಓಟಗಾರ್ತಿ ಎಂದು ಕೆಲವರು ಹೇಳುತ್ತಿದ್ದಾರೆ.
Comments