ಸಚಿನ್ ತೆಂಡೂಲ್ಕರ್, ಕುಮಾರ್ ಸಂಗಕ್ಕಾರ ದಾಖಲೆ ಮುರಿಯಲು ಮುಂದಾದ ರೋಹಿತ್ ಶರ್ಮ..!!

06 Jul 2019 10:48 AM | Sports
304 Report

ಸದ್ಯ ಕ್ರಿಕೇಟ್ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಟೀಂ ಇಂಡಿಯಾ ಈಗಾಗಲೇ ಸೆಮಿ ಪೈನಲ್ ಗೆ ಲಗ್ಗೆ ಇಟ್ಟಿದೆ.. ಈ ಬಾರಿ ವಿಶ್ವ ಕಪ್ ಗೆದ್ದು ಬರಲಿ ಗೆದ್ದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ..ಅಷ್ಟೆ ಅಲ್ಲದೆ ಈ ಬಾರಿ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿರುವ ರೋಹಿತ್ ಶರ್ಮಾ ದಾಖಲೆ ಬರೆಯಲು ಮುಂದಾಗಿದ್ದಾರೆ. ಕ್ರಿಕೇಟ್ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಫೇವರೆಟ್ ಪ್ಲೇಯರ್ ಆಗಿ ಬಿಟ್ಟಿದ್ದಾರೆ.  ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 4 ಶತಕ ಬಾರಿಸಿರುವ ರೋಹಿತ್ ಶರ್ಮಾ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ವಿಶ್ವಕಪ್ ನಲ್ಲಿ ಅತ್ಯಧಿಕ 4 ಶತಕ ದಾಖಲಿಸಿರುವ ಕುಮಾರ ಸಂಗಕ್ಕಾರ ಅವರ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮ ಇನ್ನೊಂದು ಶತಕ ಬಾರಿಸಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಇನ್ನು ರೋಹಿತ್ ಶರ್ಮ 130 ರನ್ ಗಳಿಸಿದರೆ ಒಂದೇ ವಿಶ್ವಕಪ್ ನಲ್ಲಿ ಅತಿ ಹೆಚ್ಚು 673 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲಿದ್ದಾರೆ. 2003 ರ ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ಅತಿಹೆಚ್ಚು ರನ್ ದಾಖಲೆ ಬರೆದಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ರೋಹಿತ್ ಶರ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈ ಬಾರಿ ವಿಶ್ವ ಕಪ್ ಗೆದ್ದರೆ ಟೀಂ ಇಂಡಿಯಾದ ಕ್ರಿಕೇಟ್ ಅಭಿಮಾನಿಗಳು ಫುಲ್ ಖುಷಿಯಾಗುತ್ತಾರೆ. ಈಗಾಗಲೇ ಸೆಮಿ ಪೈನಲ್ ಗೆ ಲಗ್ಗೆ ಇಟ್ಟಿರುವ ಇಂಡಿಯಾ, ವಿಶ್ವ ಕಪ್ ಗೆಲ್ಲುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments