ಪಾಕಿಸ್ತಾನದ ವಿರುದ್ದ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ..!!

17 Jun 2019 10:28 AM | Sports
149 Report

ನೆನ್ನೆಯಷ್ಟೆ ಭಾರತ ಮತ್ತು ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಸದ್ಯ ತೆರೆ ಬಿದ್ದಿದೆ..ಇಡೀ ಇಂಡಿಯಾವೇ ಸಂಭ್ರಮದಲ್ಲಿದೆ.. ಒಂದು ದೊಡ್ಡ ಯುದ್ದವನ್ನೆ ಗೆದ್ದೆ ಎನ್ನುವ ಖುಷಿಯಲ್ಲಿ ಟೀಂ ಇಂಡಿಯಾವಿದೆ.. ಕೋಟಿ ಕೋಟಿ ಭಾರತೀಯರು ಟೀಂ ಇಂಡಿಯಾ ಗೆ ಭೇಷ್ ಇಂಡಿಯಾ ಭೇಷ್ ಎನ್ನುತ್ತಿದ್ದಾರೆ. ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ದ ಭರ್ಜರಿ ಜಯವನ್ನು ಸಾಧಿಸಿದೆ.

ಟೀಂ ಇಂಡಿಯಾ ಕೊಟ್ಟಿದ್ದ 337 ರನ್ ಗಳನ್ನು ಬೆನ್ನತ್ತಿದ್ದ ಪಾಕಿಸ್ತಾನ ಆಟಕ್ಕೆ ವರುಣನ ಅಡ್ಡಿಯಾಯಿತು. ಮಳೆ ನಿಂತು ಮತ್ತೆ ಪಂದ್ಯ ಪ್ರಾರಂಭವಾದಾಗ ಡೆಕ್ವರ್ತ್ ನಿಯಮದ ಪ್ರಕಾರ ಪಾಕ್‍ಗೆ ಗೆಲ್ಲಲು 30 ಎಸೆತಗಳಲ್ಲಿ 136ರನ್ ಟಾರ್ಗೆಟ್ ನೀಡಲಾಗಿತ್ತು. ಸದ್ಯ ಅಭಿಮಾನಿಗಳ ಆಸೆಯಂತೆ ಕೊನೆಗೂ ಭಾರತಕ್ಕೆ 86 ರನ್‍ಗಳ ರೋಚಕ ಗೆಲುವು ದಕ್ಕಿದೆ. ಪಾಕಿಸ್ತಾನದ ವಿರುದ್ದ ಭಾರತ ಗೆದ್ದ ಖುಷಿಯಲ್ಲಿ ಸಿಲಿಕಾನ್ ಸಿಟಿಯಲ್ಲೂ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮನೆ, ಅಂಗಡಿ, ಹೊಟೇಲುಗಳಲ್ಲಿ ಜನ ಉಸಿರು ಬಿಗಿ ಹಿಡಿದು ಪಂದ್ಯ ನೋಡುತ್ತಿದ್ದರು.. ಕೊನೆಗೆ ಪಾಪಿ ಪಾಕಿಸ್ತಾನದ ವಿರುದ್ದ  ಭಾರತ ತಂಡ ಗೆದ್ದು ಬೀಗುತ್ತಿದೆ. ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

Edited By

Manjula M

Reported By

Manjula M

Comments