ಮಗಳಿಂದ ಧೋನಿಗೆ  ಸಿಕ್ತು ವಿಶೇಷ ಗಿಫ್ಟ್..!! ಏನ್ ಗೊತ್ತಾ..?

07 Jun 2019 11:27 AM | Sports
287 Report

ಈಗಾಗಲೇ ವಿಶ್ವಕಪ್ ಪಂದ್ಯಾವಳಿ ಪ್ರಾರಂಭವಾಗಿದ್ದು, ವಿಶ್ವಕಪ್ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಿದೆ ಅಭಿಮಾನಿಗಳ ಮೆಚ್ಚಿಗೆಗೆ ಪಾತ್ರವಾಗಿದೆ. . ದಕ್ಷಿಣ ಆಫ್ರಿಕಾದ ವಿರುದ್ದ 6 ವಿಕೆಟ್ ಗಳಿಂದ ಗೆದ್ದಿರುವ ಭಾರತ ವಿಶ್ವಕಪ್ ನಲ್ಲಿ ಶುಭಾರಂಭವನ್ನು ಪ್ರಾರಂಭ ಮಾಡಿದೆ.. ಇದು ಇಂಡಿಯಾ ಕ್ರಿಕೆಟ್ ಪ್ರೇಮಿಗಳ ಖುಷಿಗೂ ಕೂಡ ಕಾರಣವಾಗಿದೆ. ಪಂದ್ಯ ಮುಗಿದು ಎರಡು ದಿನವಾದರೂ ಕೂಡ  ಜನರು ಇನ್ನೂ ಆ ಪಂದ್ಯದ ಬಗ್ಗೆಯೇ ಮಾತನಾಡುತ್ತಿದ್ದಾರೆ.  

ಮೊದಲಿಗಿಂತಲೂ ಈಗ ಭಾರತ ತಂಡಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.. . ಅದರಲ್ಲಿ ಆ ಬಳಗಕ್ಕೆ ಇದೀಗ ಪುಟ್ಟ ಅಭಿಮಾನಿಯು ಕೂಡ ಸೇರಿಕೊಂಡಿದ್ದಾಳೆ.  ಯಾರಪ್ಪ ಆ ಪುಟ್ಟ ಅಭಿಮಾನಿ ಅಂತೀರಾ.. ಅವರು ಬೇರೆ ಯಾರು ಅಲ್ಲ... ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾ.  ಕೇವಲ ಅಪ್ಪನನ್ನು ಮಾತ್ರವಲ್ಲದೆ  ಇಡೀ ಭಾರತ ತಂಡವನ್ನು ಇಡೀ ತಂಡವನ್ನು ಪ್ರೋತ್ಸಾಹಿಸಲು ಈ ಬಾರಿಯೂ ಜೀವಾ ಕ್ರಿಕೇಟ್ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಜೀವಾ, ತಂಡದ ಆಟಗಾರರನ್ನು ಪ್ರೋತ್ಸಾಹಿಸುವ ಜೊತೆಗೆ ತಂದೆಗೆ ವಿಶೇಷವಾದ ಗಿಫ್ಟ್ ಅನ್ನು ನೀಡಿದ್ದಾರೆ. ಅರೇ ಹೌದಾ.. ಏನು ಅಂತೀರಾ.. ಪ್ರೀತಿಯಿಂದ ತಂದೆಗೆ ಮುತ್ತು ಕೊಟ್ಟಿದ್ದಾಳೆ ಜೀವಾ... ಅಪ್ಪ ಮೈದಾನದಲ್ಲಿ ಆಟವಾಡ್ತಿದ್ದರೆ ಜೀವಾ ಕಿಸ್ ನೀಡಿ ಅಪ್ಪನನ್ನು ಪ್ರೋತ್ಸಾಹಿಸಿದ್ದಾಳೆ. ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಜೂನ್ 9 ರಂದು ಆಡಲಿದೆ. ಜೂನ್ 13 ರಂದು ನ್ಯೂಜಿಲ್ಯಾಂಡ್ ವಿರುದ್ಧ ಮೈದಾನಕ್ಕಿಳಿಯಲಿದೆ. ಈ ಬಾರಿ ಭಾರತ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಳ್ಳುತ್ತದೆಯೊ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments