ಜನರಿಗೆ ಮೋಸ ಮಾಡ್ತಿದ್ದ ಕ್ರಿಕೆಟ್ ಆಟಗಾರ ಇದೀಗ ಕಂಬಿಯ ಹಿಂದೆ..!!

04 May 2019 1:53 PM | Sports
2332 Report

ಭಾರತದಲ್ಲಿ ಕ್ರಿಕೇಟ್ ಆಟ ತುಂಬಾ ಅಗ್ರಸ್ಥಾನದಲ್ಲಿದೆ.. ಕ್ರಿಕೇಟ್’ನಲ್ಲಿ ಮಹಾನ್ ಸಾಧನೆ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದ ಯುವಕನ ಕಥೆ ಇದು.. ಕ್ರಿಕೆಟ್ ಆಟಗಾರರು ಹಗಲು,ರಾತ್ರಿ ಎನ್ನದೆ ಸಾಧನೆ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಈ ಯುವಕ ಸಾಧನೆ ಮಾಡುವುದನ್ನು ಬಿಟ್ಟು, ಜನರಿಗೆ ಮೋಸ ಮಾಡಿ ಜೈಲು ಪಾಲಾಗಿದ್ದಾನೆ..   ಕ್ರಿಕೆಟ್ ಮಾಜಿ ಆಟಗಾರನೊಬ್ಬ ಜನರಿಗೆ ಮೋಸ ಮಾಡಿ ಜೈಲು ಸೇರಿದ್ದಾರೆ. ಸುಳ್ಳು ಹೇಳಿ ಜನರಿಗೆ ಮೋಸ ಮಾಡ್ತಿದ್ದ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಂತಹ ಈ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಜಯವಾಡ ಸಿಟಿ ಪೊಲೀಸರು ದೂರಿನ ಮೇಲೆ ರಣಜಿ ಆಟಗಾರನಾಗಿದ್ದ ನಾಗರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಾಜು ಎಂಬ ವ್ಯಕ್ತಿ ಬಿಸಿಸಿಐ ಮುಖ್ಯ ಆಯ್ಕೆದಾರ ಎಂಎಸ್ಕೆ ಪ್ರಸಾದ್ ಹೆಸರಲ್ಲಿ ಜನರನ್ನು ನಂಬಿಸುತ್ತಿದ್ದನಂತೆ. ನಾನು ಎಂಎಸ್ಕೆ ಪ್ರಸಾದ್ ಎನ್ನುತ್ತಿದ್ದ ನಾಗರಾಜು, ಜನರಿಗೆ ಮೋಸ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಾಗರಾಜು, ಸದ್ಯ ವಿಶಾಖಪಟ್ಟಣಂನ ಮಧುರಾವಾಡದಲ್ಲಿ ನೆಲೆಸಿದ್ದರು. ರಣಜಿಯ ದಕ್ಷಿಣ ವಲಯ (2011) ಹಾಗೂ ಕೇಂದ್ರ ವಲಯ (2013) ತಂಡಕ್ಕೆ ನಾಗರಾಜು ಆಡಿದ್ದರಂತೆ. ಈತ ಎಂಬಿಎ ಪದವಿದರನಾಗಿದ್ದರು.. 2014ರಲ್ಲಿ ಆಂಧ್ರ ರಣಜಿ ತಂಡಕ್ಕೆ ನಾಗರಾಜು ಆಟವಾಡಿದ್ದರು ಎಂದು ಹೇಳಲಾಗುತ್ತಿದೆ… ಇದೀಗ ಏನೋ ಮಾಡಲು ಹೋಗಿ ಏನೋ ಮಾಡಿದಂತೆ ಆಗಿದೆ.. ಇದೀಗ ನಾಗರಾಜು ಜೈಲು ಪಾಲಾಗಿದ್ದಾನೆ, ಕ್ರಿಕೇಟ್’ನಲ್ಲಿ ಏನಾದರೂ ಸಾಧನೆ ಮಾಡೋದನ್ನ ಬಿಟ್ಟು ಜನರಿಗೆ ಮೋಸ ಮಾಡಿ ಜೈಲು ಪಾಲಾಗಿದ್ದಾನೆ.   

Edited By

Manjula M

Reported By

Manjula M

Comments