ಹುಟ್ಟು ಹಬ್ಬದ ದಿನದಿಂದೇ ತಾನೊಬ್ಬ ಸಲಿಂಗಕಾಮಿ ಎಂದ ಖ್ಯಾತ ಕ್ರಿಕೆಟರ್..!!

30 Apr 2019 9:28 AM | Sports
350 Report

ತಮ್ಮ ವೇಗದ ಬೌಲಿಂಗ್ ಮತ್ತು ಅಬ್ಬರದ ಬ್ಯಾಟಿಂಗ್’ನಿಂದಾಗಿ ಖ್ಯಾತರಾಗಿದ್ದ ಆಸ್ಟ್ರೇಲಿಯಾ ಆಲ್ ರೌಂಡರ್ ಜೇಮ್ಸ್ ಪಕ್ನರ್ ತಮ್ಮ ಹುಟ್ಟು ಹಬ್ಬದ ದಿನದಂದು ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾರೆ..ತಮ್ಮ ಹುಟ್ಟು ಹಬ್ಬದ ದಿನದಂದೆ ತಾನೊಬ್ಬ ಸಲಿಂಗಕಾಮಿಯೆಂದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟರ್ ಜೇಮ್ಸ್‌ ಫಕ್ನರ್‌ ತಿಳಿಸಿದ್ದಾರೆ.. ಇತ್ತೀಚೆಗೆ ಸಲಿಂಗಕಾಮದ ಗುಟ್ಟನ್ನು ಬಹಿರಂಗಗೊಳಿಸುವ ಧೈರ್ಯವನ್ನು ಹಲವು ಕ್ರೀಡಾಪಟುಗಳು ತೋರುತ್ತಿದ್ದಾರೆ. 

ಬ್ಯಾಟಿಂಗ್ ನಲ್ಲಿ ಈತ ಎತ್ತಿದ ಕೈ.. ಬ್ಯಾಟಿಂಗ್ ನಿಂದಾಗಿಯೇ ಸಾಕಷ್ಟು ಹೆಸರು ಮಾಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್‌ ಫಕ್ನರ್ ಅವರು ಇಂದು ತಮ್ಮ ಸಲಿಂಗಕಾಮದ ಗುಟ್ಟನ್ನು ರಟ್ಟು ಮಾಡಿದ್ದಾರೆ.. ಈ ವರೆಗೆ ಅವರು ಈ ವಿಷಯದ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ…. ಇಂದು ತಮ್ಮ 29ನೇ ಜನ್ಮ ದಿನ ಆಚರಿಸಿಕೊಂಡ ಜೇಮ್ಸ್‌ ಫಕ್ನರ್, ತಾವು, ತಾಯಿ ಮತ್ತು ತಮ್ಮ 'ಬಾಯ್‌ಫ್ರೆಂಡ್‌' ಜೊತೆಗೆ ಊಟ ಮಾಡುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜೇಮ್ಸ್‌ ಫಕ್ನರ್‌ 'ಬಾಯ್‌ಫ್ರೆಂಡ್‌' ಜೊತೆಗೆ ಭೋಜನ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಐದು ವರ್ಷದಿಂದಲೂ ತಾವು ಜೊತೆಯಾಗಿರುವುದಾಗಿಯೂ ಬರೆದುಕೊಂಡಿದ್ದಾರೆ.. ಈ ವಿಷಯ ಈ ವರೆಗೆ ಯಾರಿಗೂ ಕೂಡ ತಿಳಿದಿರಲಿಲ್ಲ.. ಇದೀಗ ಅವರೇ ಈ ಗುಟ್ಟನ್ನು ರಟ್ಟು ಮಾಡಿದ್ದು ಬಾರೀ ಚರ್ಚೆಗೆ ಕಾರಣವಾಗಿದೆ.

Edited By

Manjula M

Reported By

Manjula M

Comments