ಶ್ರೇಷ್ಟ ಕ್ರಿಕೆಟಿಗ ಪ್ರಶಸ್ತಿ ಮುಡಿಗೇರಿಸಿಕೊಂಡ ಕೊಹ್ಲಿ..!

11 Apr 2019 12:37 PM | Sports
122 Report

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಈ ಬಾರಿ ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್ ಪ್ರಶಸ್ತಿ ಲಭಿಸಿದೆ. ನಾಯಕ ವಿರಾಟ್ ಕೊಹ್ಲಿ ಸತತ ಮೂರನೇ ಬಾರಿಗೆ ಈ ಪ್ರಶಸ್ತಿಗೆ  ಆಯ್ಕೆಯಾಗಿದ್ದಾರೆ. ಐದು ಪ್ರಮುಖ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಪ್ರತೀ ವರ್ಷ್ ಅಲ್ಮ್ಯಾನಾಕ್ ಸಂಸ್ಥೆ  ನಡೆಸುವ ಸಮೀಕ್ಷೆಯಲ್ಲಿ ವಿಶ್ವದ ಬೆಸ್ಟ್ ಕ್ರಿಕೆಟರ್ಸ್ ಐದು ಜನರನ್ನು ಆಯ್ಕೆ ಮಾಡಿ, ಗೌರವಿಸುತ್ತದೆ. ಅದರಂಥೇ ಈ ಬಾರಿ ಆ ಐದು ಕ್ರಿಕೆಟಿಗರು ಯಾರು ಗೊತ್ತಾ...?

ಈ ಸಂಸ್ಥೆ ವಿಶ್ವದ ಐದು ಕ್ರಿಕೆಟಿಗರ ಹೆಸರಿನ ಪಟ್ಟಿಯನ್ನ ಬಿಡುಗಡೆ ಮಾಡುತ್ತದೆ. ಅದರಂತೇ ಭಾರತೀಯ ಕ್ರಿಕೆಟ್ ತಡದ ನಾಯಕ ವಿರಾಟ್ ಕೊಹ್ಲಿಯ ಹೆಸರನ್ನು ಕೂಡ  ಪ್ರಕಟಿಸಿದೆ.ಟ್ಯಾಮಿ‌ ಬೌಂಟನ್, ಜೋಸ್ ಬಟ್ಲರ್‌, ಸ್ಯಾಮ್ ಕರ್ರನ್ ಮತ್ತು ರೋರಿ ಬರ್ನ್ಸ್ ಇತರೆ ನಾಲ್ವರು ಆಟಗಾರರಾಗಿದ್ದಾರೆ.ವಿರಾಟ್ ಕೊಹ್ಲಿ 2018 ರಲ್ಲಿ ಗಣನೀಯ ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಪ್ರತಿ ಮ್ಯಾಚ್ ನಲ್ಲಿಯೂ ಶೇ.68.37 ರನ್ ಸರಾಸರಿಯಂತೆ ಒಟ್ಟು 2735 ರನ್ ಗಳಿಸಿದ್ದಾರೆ.

Edited By

Kavya shree

Reported By

Kavya shree

Comments