ಇಂದಿನಿಂದ ಶುರುವಾಯ್ತು ಐಪಿಎಲ್​ ಹಬ್ಬ ಮೊದಲ ಪಂದ್ಯದಲ್ಲೆ ಮುಖಾಮುಖಿಯಾಗಲಿದ್ದಾರೆ ಧೋನಿ V/S ಕೊಹ್ಲಿ..!

23 Mar 2019 1:45 PM | Sports
253 Report

ಇಂದಿನಿಂದ ಕ್ರಿಕೇಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ….ಕ್ರಿಕೇಟ್ ಅಭಿಮಾನಿಗಳು ಇವತ್ತಿನಿಂದ ಟಿವಿ ಮುಂದೆ ಹಾಜರ್… ಇದೀಗ  ಕ್ರಿಕೆಟ್ ಪ್ರೇಮಿಗಳ ಹಾಟ್​ ಫೇವರಿಟ್​ ಐಪಿಎಲ್​ಗೆ ವೇದಿಕೆ ಸಜ್ಜಾಗಿದೆ. ಇಂದಿನಿಂದ ಕ್ರಿಕೆಟ್  ಲೀಗ್​ನ 12ನೇ ಸೀಸನ್​ಗೆ ಚಾಲನೆ ದೊರೆಯಲಿದೆ. ಚೆನ್ನೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್​, ಡಿಫೆಂಡಿಂಗ್ ಚಾಂಪಿಯನ್ಸ್​​​  ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದ್ದಾರೆ.. ಮೇಲ್ನೋಟಕ್ಕೆ ಎರಡೂ ತಂಡಗಳು ಸ್ಟ್ರಾಂಗ್ ಆಗಿದ್ದು, ಟಫ್​ ಫೈಟ್​ ಕೊಡುವುದರಲ್ಲಿ ನೋಡೌಟ್..

ಸಿಎಸ್​ಕೆ ಪಡೆಯಲ್ಲಿ ಫಾಫ್​ ಡುಪ್ಲೆಸಿಸ್​, ಶೇನ್​ ವ್ಯಾಟ್ಸನ್, ಸುರೇಶ್​ ರೈನಾ, ಡ್ವೇನ್​ ಬ್ರಾವೋ, ಕೇದಾರ್ ಜಾಧವ್, ಅಂಬಟಿ ರಾಯುಡು ರಂತಹ ಸ್ಟ್ರಾಂಗ್ ಆಟಗಾರರೇ ಇದ್ದಾರೆ.. ಇನ್ನೂ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ನಾಯಕತ್ವದ ಆರ್​ಸಿಬಿ ಪಡೆ ಕಳೆದ ಸೀಸನ್​ಗಿಂತ ಈ ಬಾರಿ ಹೆಚ್ಚು ಸ್ಟ್ರಾಂಗ್ ಆಗಿದೆ. ಈವರೆಗೆ ಒಮ್ಮೆಯು ಟ್ರೋಫಿ ಗೆಲ್ಲದ ಆರ್​ಸಿಬಿ ಈ ಬಾರಿ ಈ ಸಲ ಕಪ್​ ನಮ್ದೇ ಅನ್ನೋ ಅಭಿಮಾನಿಗಳ ಮಾತನ್ನ ನಿಜವಾಗಿಸುವ ಪಣ ತೊಟ್ಟಿದೆ. ಅನುಭವಿ ಆಟಗಾರರ ಜೊತೆಗೆ ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿದ ಯುವ ಆಟಗಾರರನ್ನ ಆರ್​ಸಿಬಿ ನೆಚ್ಚಿಕೊಂಡಿದೆ. ವಿರಾಟ್​ ಕೊಹ್ಲಿ, ಎಬಿ ಡಿವಿಲಿಯರ್ಸ್​, ಶಿಮ್ರಾನ್ ಹೆಟ್ಮಾಯರ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್ಸ್. ಇವರ ಜೊತೆಗೆ ಯುವ ಬ್ಯಾಟ್ಸ್​​ಮನ್ ಶಿವಂ ದುಬೆ, ಸೀನಿಯರ್​ ಪ್ಲೇಯರ್​ ಪಾರ್ಥಿವ್ ಪಟೇಲ್​, ಇಂಗ್ಲೆಂಡ್ ಆಲ್​ರೌಂಡರ್ ಮೊಯಿನ್ ಅಲಿ ತಮ್ಮ ಸಾಮರ್ಥ್ಯ ತೋರಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್ ಅಭಿಮಾನಿಗಳು ಹೈವೋಲ್ಟೇಜ್ ಪಂದ್ಯ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.. ಈ ಬಾರಿಯಾದರೂ ಕಪ್ ನಮ್ದೆ ಅನ್ನುವ ಮಾತನ್ನು ನಿಜ ಮಾಡಲಿ ಅನ್ನೋದು ಅಭಿಮಾನಿಗಳ ಆಸೆ..

Edited By

Manjula M

Reported By

Manjula M

Comments