ಹಾರ್ಧಿಕ್ ಪಾಂಡ್ಯ ಕೈ ಮೇಲೆ ಕನ್ನಡ ಕಲರವ…!!?

06 Mar 2019 11:43 AM | Sports
810 Report

ಸ್ವಲ್ಪ ದಿನಗಳ ಹಿಂದೆ ವಿವಾದಾತ್ಮಕ ಹೇಳಿಕೆಯಿಂದಲೆ ಎಲ್ಲರ ಮುಂದೆ ಮುಜುಗರಕ್ಕೆ ಒಳಗಾಗಿದ್ದ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ಧಿಕ್ ಪಾಂಡ್ಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ… ಈಗ ಮತ್ತೆನ್ ವಿವಾದ ಸೃಷ್ಟಿ ಮಾಡಿದ್ರೋ ಎಂದು ಯೋಚನೆ ಮಾಡುತ್ತಿದ್ದಾರಾ… ಆ ತರ ಏನು ಇಲ್ಲ ..ಮುಂದೆ ಓದಿ ನಿಮಗೆ ಗೊತ್ತಾಗುತ್ತೆ ಹಾರ್ಧಿಕ್ ಪಾಂಡ್ಯ ಏನ್ ಮಾಡಿದ್ದಾರೆ ಅಂತ…

ಹಾರ್ಧಿಕ್ ಪಾಂಡ್ಯ ಇದೀಗ ಕನ್ನಡ ಸೇರಿದಂತೆ 16 ಭಾಷೆಗಳಲ್ಲಿ ಕೈ ಮೇಲೆ ತನ್ನ ಹೆಸರು ಹಚ್ಚೆ(ಟ್ಯಾಟೊ) ಹಾಕಿಸಿಕೊಳ್ಳುವ ಮೂಲಕ ಮತ್ತೆ ಚರ್ಚೆಗೆ ಗುರಿಯಾಗಿದ್ದಾರೆ…  ಭಾರತದ ಅತ್ಯಂತ ಸ್ಟೈಲಿಶ್ ಆಟಗಾರ ಎಂಬ ಹೆಸರಿಗೆ ತಕ್ಕಂತೆ ಪ್ರತೀ ಸರಣಿಯಲ್ಲೂ ಡಿಫರೆಂಟ್ ಹೇರ್ ಸ್ಟೈಲ್ ಮಾಡಿಸಿಕೊಂಡು  ಎಲ್ಲರ ಗಮನ ಸೆಳೆಯುತ್ತಿದ್ದ ಹಾರ್ಧಿಕ್ ಪಾಂಡ್ಯ ಇದೀಗ ತನ್ನ ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೊ ಫೋಟೊವನ್ನು ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಹಾರ್ಧಿಕ್ ಪಾಂಡ್ಯ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದೂ ಅಲ್ಲದೇ ಟ್ರೋಲ್ ಗೆ ಕೂಡ ಗುರಿಯಾಗಿದೆ.

ಗೊತ್ತಿಲ್ಲದ ಭಾಷೆಯಲ್ಲೂ ಟ್ಯಾಟೊ ಹಾಕಿಸಿಕೊಳ್ಳಲು ಅವರು ಮಾಡಿದ ತಂತ್ರದ ಬಗ್ಗೆ ಹೆಚ್ಚು ಟೀಕೆ ವ್ಯಕ್ತವಾಗಿದೆ. 16 ಭಾಷೆಗಳಲ್ಲಿ ಟ್ಯಾಟೊ ಹಾಕಿಸಿಕೊಳ್ಳಲು ಹಾರ್ಧಿಕ್ ಗೂಗಲ್ ಟ್ರಾನ್ಸ್ ಲೇಟ್ ಉಪಯೋಗಿಸಿಕೊಂಡಿದ್ದಾರೆ. ಇದರಿಂದ ಹಾರ್ಧಿಕ್  ಹೆಸರು ಒಂದೊಂದು ಭಾಷೆಯಲ್ಲೂ ಒತ್ತಕ್ಷರಗಳ ದೋಷಗಳು ಕಂಡು ಬಂದಿದೆ. ಇದರಿಂದ ಆಯಾ ಭಾಷೆಯ ಅಭಿಮಾನಿಗಳು ಹಾರ್ಧಿಕ್ ಅವರನ್ನು ಟೀಕೆ ಮಾಡಿದ್ದಾರೆ. ಹಾರ್ಧಿಕ್ ಪಾಂಡ್ಯ ಕೈಮೇಲೆ ಹಾಕಿಸಿಕೊಂಡ 16 ಭಾಷೆಗಳ ಟ್ಯಾಟೂ ಪೈಕಿ ನಮ್ಮ ಕನ್ನಡವೂ ಕೂಡ ಸೇರಿಕೊಂಡಿದೆ. 3ನೇ ಸಾಲಿನಲ್ಲಿ ಕನ್ನಡ ಇದ್ದು ಹಾರ್ದಿಕ್ ಬದಲು ಹಾರ್ಡಿಕ್ ಎಂದು ಹಾಕಿಸಿಕೊಂಡಿದ್ದಾರೆ.ಇದರಿಂದ ಕನ್ನಡಿಗರು ಕೊಂಚ ಬೇಸರಗೊಂಡಿದ್ದಾರೆ..

Edited By

Manjula M

Reported By

Manjula M

Comments