ದ್ವೇಷದ ನಡುವೆಯೂ ಪಾಕ್ ಜೊತೆ ವಿಶ್ವಕಪ್ ಆಡಲೇಬೇಕೆಂದು ಮಾಜಿ ಕ್ರಿಕೆಟಿಗನ ಹರಕೆ..!

02 Mar 2019 11:38 AM | Sports
291 Report

ಪುಲ್ವಾಮಾ ದಾಳಿಯಿಂದಾಗಿ ಭಾರತ ಮತ್ತು  ಪಾಕಿಸ್ತಾನದ ನಡುವೆ ದ್ವೇಷ ಹೆಚ್ಚಿದೆ. ಈಗಾಗಲೇ ನಮ್ಮ ಪೈಲೆಟ್ ವಿಂಗ್ ಕಮಾಂಡರ್ ನನ್ನು ಪಾಕ್ ನೆಲದಿಂದ ರಿಲೀಸ್ ಮಾಡಿಸಿ ಭಾರತಕ್ಕೆ ಕರೆತರಲಾಗಿದೆ. ಈ ಬಗ್ಗೆ ಪಾಕ್ ಮೇಲ್ನೋಟಕ್ಕೆ ಶಾಂತಿ ಮಂತ್ರ ಜಪಿಸುತ್ತಿದ್ದರೂ ಒಳಗೊಳಗೆ ಭಾರತದ ವಿರುದ್ಧ ಯುದ್ಧ ಸಾರಲು ಕಾದು ಕುಳಿತಂತಿದೆ. ಪಾಕ್ ಮತ್ತು ಇಂಡಿಯಾ ಸಂಬಂಧ ಚೆನ್ನಾಗಿಲ್ಲಾ, ಸದ್ಯ ಟೀಂ ಇಂಡಿಯಾ ನಾಯಕರು, ಆಟಗಾರರು ವಿಶ್ವಕಪ್ ನಲ್ಲಿ ಪಾಕ್ ಜೊತೆ ಆಡಬೇಕಾ ಅಥವಾ ಬೇಡವಾ ಎಂಬ ತೀರ್ಮಾನ ನಮಗಳಗಿಂತ ಬಿಸಿಸಿಐಗೆ ಬಿಟ್ಟಿದ್ದು, ಅವರ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಆದರೆ ಮಾಜಿ ಕ್ರಿಕೆಟಿಗನೊಬ್ಬ ಭಾರತ ಪಾಕ್ ನೊಂದಿಗೆ ಕ್ರಿಕೆಟ್ ಆಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ದೇಶಾದ್ಯಂತ  ಪಾಕ್’ನೊಂದಿಗೆ ವಿಶ್ವಕಪ್ ಆಡೋದು ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದರು, ಮಾಜಿ ಕ್ರಿಕೆಟಿಗನೊಬ್ಬ ಎರಡು ದೇಶಗಳ ನಡುವೆ ವಿಶ್ವಕಪ್ ನಡೆಯಲೇ ಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸುವಂತೆ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಇಂಡೋ-ಪಾಕ್ ಪಂದ್ಯ ಯಶಸ್ವಿಯಾಗಿ ನಡೆಯುವಂತೆ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಸರ್ಕಾರ ಈ ಕುರಿತು ಅಂತಿಮ ತಿರ್ಮಾನ ತೆಗೆದುಕೊಳ್ಳಲಿ. ಆದರೆ ಕ್ರಿಕೆಟ್ ಮುಂದುವರಿಯಲಿ ಎಂದಿದ್ದಾರೆ. ಉಗ್ರರಿಗೆ ಪಾಠ ಕಲಿಸುವವರೆಗೂ ಪಾಕಿಸ್ತಾನ ಜೊತೆ ಯಾವುದೇ ಮಾತುಕತೆ ಇಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಇಂಡೋ-ಪಾಕ್ ಸಮಸ್ಯೆಯಿಂದ 2019ರ ವಿಶ್ವಕಪ್ ಪಂದ್ಯದ ಮೇಲೆ ಕಾರ್ಮೋಡ ಆವರಿಸಿದೆ.

Edited By

Kavya shree

Reported By

Kavya shree

Comments