ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲೆ ಸೋಲೊಪ್ಪಿಕೊಂಡ ಭಾರತ

25 Feb 2019 9:27 AM | Sports
161 Report

ನೆನ್ನೆಯಷ್ಟೆ ಮೊದಲ ಟಿ 20 ಪಂದ್ಯ ಆರಂಭಗೊಂಡಿದೆ.. ಆಸ್ಟ್ರೇಲಿಯಾ ವಿರುದ್ದ ಭಾರತ ನೆನ್ನೆ ಮೊದಲ ಟಿ ಟ್ವೆಂಟಿ ಪಂಧ್ಯವನ್ನು ಆಡಿತ್ತು.. ಆದರೆ ಮೊದಲ ಪಂಧ್ಯದಲ್ಲಿಯೇ ಭಾರತ ಸೋಲೊಪ್ಪಿಕೊಂಡಿದೆ.ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ(3-16) ಉತ್ತಮ ಆಟವನ್ನು ಪ್ರದರ್ಶಿಸಿದರೂ ಕೂಡ  ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಸೋಲು ಕಂಡಿದೆ. ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿಕೊಂಡಿತ್ತು..

ಆಸ್ಟ್ರೇಲಿಯಾಕ್ಕೆ ಗೆಲ್ಲಲು 127 ರನ್'ಗಳನ್ನು ಕೊಟ್ಟಿತ್ತು ಭಾರತ… ಭಾರತದ ವಿರುದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ ಕೇವಲ 5 ರನ್'ಗಳಾಗುವಷ್ಟರಲ್ಲೇ ಸ್ಟೋನಿಸ್ ಹಾಗೂ ನಾಯಕ ಫಿಂಚ್ ಪೆವಿಲಿಯನ್ ಸೇರಿದರು. ಆ ಬಳಿಕ ಮ್ಯಾಕ್ಸ್'ವೆಲ್-ಡಾರ್ಸಿ ಶಾರ್ಟ್ ಜೋಡಿ ಮೂರನೇ ವಿಕೆಟ್'ಗೆ 84 ರನ್'ಗಳ ಜತೆಯಾಟವಾಡುವ ಮೂಲಕ ಆಸಿಸ್ ಗೆಲುವಿನ ಆಸೆಯನ್ನು ಮತ್ತೆ ಚಿಗುರಿಸಿದರು…ಮ್ಯಾಕ್ಸ್'ವೆಲ್ 56 ರನ್ ಗಳಿಸಿ ಆಸಿಸ್'ಗೆ ನೆರವಾದರು. ಆದರೆ ಮ್ಯಾಕ್ಸ್'ವೆಲ್ ವಿಕೆಟ್ ಬೀಳುತ್ತಿದ್ದಂತೆ ಕುಸಿತ ಕಂಡ ಆಸ್ಟ್ರೇಲಿಯಾ ತಂಡ 109 ರನ್'ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಪರಿತಪಿಸಿತು.. . ಜಸ್‌ಪ್ರಿತ್ ಬುಮ್ರಾ ಕೊನೆಯ ಓವರ್'ನಲ್ಲಿ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆಯನ್ನು ಮತ್ತೆ ಮೂಡಿಸಿದರು. ಆದರೆ ಕೊನೆಯ ಓವರ್ ಬೌಲಿಂಗ್ ಅಂದುಕೊಂಡಂಗೆ ಸಾಧ್ಯವಾಗಲಿಲ್ಲ… ಈ ಕೊನೆಯ ಓವರ್ ಭಾರತಕ್ಕೆ ಸೋಲನ್ನು ತಂದುಕೊಟ್ಟಿತ್ತು..

Edited By

Manjula M

Reported By

Manjula M

Comments