ಪಾಕ್ ನಿಷೇಧದ ಬಗ್ಗೆ ಕೊನೆಗೂ ಮೌನ ಮುರಿದ ಟೀಂ ಇಂಡಿಯಾ ನಾಯಕ….!

23 Feb 2019 3:39 PM | Sports
482 Report

ಪುಲ್ವಾಮಾ ಭಯೋತ್ಪಾದನ ದಾಳಿಯಿಂದಾಗಿ ಭಾರತ ಕ್ರಿಕೆಟ್ ಸಂಬಂಧ ಭಾರೀ ಅನುಮಾನಗಳು ಎದ್ದಿವೆ. ಪಾಕಿಸ್ತಾನ ವಿರುದ್ಧ  ಆಡಬಾರದು ಎಂಬ ಸಾರ್ವಜನಿಕರ ಆಗ್ರಹದ ಕುರಿತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಟ್ರೇಲಿಯಾ  ವಿರುದ್ಧದ ಟಿ-20 ಸರಣಿಯ ಟೂರ್ನಿ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ವೇಳೆ ಕೊಹ್ಲಿ ಈ ಕುರಿತು ಮಾತನಾಡಿದ್ದು, ಪಾಕಿಸ್ತಾನ ವಿರುದ್ಧ ಆಡಬೇಕಾ ಬೇಡವಾ ಎಂಬ ಬಗ್ಗೆ ಸರ್ಕಾರ ಹಾಗೂ ಬಿಸಿಸಿಐ ಯಾವುದೇ ನಿರ್ಣಯ ತೆಗೆದುಕೊಂಡರು ಗೌರವಿಸಿ ಬದ್ಧರಾಗಿರುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ. ಇದೇ ವೇಳೆ ಪುಲ್ವಾಮಾ ದಾಳಿಯಲ್ಲಿ  ಹುತಾತ್ಮರಾದ ಯೋಧರ  ಕುಟುಂಬಗಳಿಗೆ ಸಂತಾಪ ಸೂಚಿಸಿದ್ರು.

ಮೇ 30 ರಿಂದ ಆರಂಭವಾಗುವ 2019ರ ವಿಶ್ವಕಪ್ ಸರಣಿಯ ಲೀಗ್ ಹಂತದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಎದುರಿಸಲಿದೆ.ಪಂದ್ಯದ ಕುರಿತು ನಿರ್ಧಾರ ಕೈಗೊಳ್ಳಲು ಶುಕ್ರವಾರ ಸಭೆ ಸೇರಿದ್ದ ಬಿಸಿಸಿಐ ದ್ವಂದ್ವ ನಿರ್ಧಾರವನ್ನೇ ಮುಂದುವರಿಸಿತು. ಆದರೆ ಐಸಿಸಿ ಸಮಿತಿಯ ಸದಸ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳೊಂದಿಗೆ ಕ್ರಿಕೆಟ್ ಒಪ್ಪಂದಗಳನ್ನು ರದ್ದು ಮಾಡಿಕೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿತ್ತು. ಇದರ ನಡುವೆಯೇ ಸಚಿನ್ ತೆಂಡೂಲ್ಕರ್ ಅವರು ಭಾರತ, ಪಾಕ್ ಪಂದ್ಯಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್‍ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿ ದೇಶ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ಕ್ರಿಕೆಟ್'ಗಿಂತ ನನಗೆ ದೇಶವೇ ಮೊದಲು ಎಂದು ತಿಳಿಸಿದ್ದರು.

Edited By

Kavya shree

Reported By

Kavya shree

Comments