ವಿಶ್ವಕಪ್ ಬಳಿಕ ಎಂ ಎಸ್ ಧೋನಿ ನಿವೃತ್ತಿ…!?

12 Feb 2019 5:22 PM | Sports
90 Report

ಟೀಂ ಇಂಡಿಯಾದಲ್ಲಿರುವ ಪ್ರತಿಯೊಬ್ಬರು ಬ್ಯಾಟ್  ಹಿಡಿದು ಫೀಲ್ಡ್ ಗೆ ಎಂಟ್ರಿ ಕೊಟ್ಟರೆ ಕ್ರಿಕೆಟ್ ಅಭಿಮಾನಿಗಳು ಸಖತ್ ಎಂಜಾಯ್ ಮಾಡ್ತಾರೆ.. ಅದರಲ್ಲೂ  ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಗಿರುವ  ಎಂ ಎಸ್ ಧೋನಿ ವಿಶ್ವಕಪ್ ನಂತರ ನಿವೃತ್ತಿ ಆಗುತ್ತಾರೆ ಎಂಬ ಗುಟ್ಟನ್ನು ಟೀಂ ಇಂಡಿಯಾದ ಆಯ್ಕೆ ಮಂಡಳಿಯ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಇಂದಿಲ್ಲ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಸರಣಿ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಹೇಂದ್ರಸಿಂಗ್‍ಧೋನಿ ಅವರು ನ್ಯೂಜಿಲೆಂಡ್ ಪ್ರವಾಸದಲ್ಲಿ ತಮ್ಮ ಬ್ಯಾಟಿಂಗ್ ಕಳೆದುಕೊಂಡಂತೆ ಕಂಡರೂ ವಿಶ್ವಕಪ್‍ಗೂ ಮುನ್ನವೇ ನಡೆಯಲಿರುವ ಐಪಿಎಲ್‍ನಲ್ಲಿ ಮಹೇಂದ್ರಸಿಂಗ್ ಧೋನಿ ತಮ್ಮ ಬ್ಯಾಟಿಂಗ್ ಮಿಂಚನ್ನು ಹರಿಸಲಿದ್ದಾರೆ ಎಂಬ ವಿಶ್ವಾಸದ ಮಾತುಗಳನ್ನು ತಿಳಿಸಿದರು…ಆಸ್ಟ್ರೇಲಿಯಾ ಸರಣಿಯ ಸಾರಥ್ಯವನ್ನು ವಿರಾಟ್ ಕೊಹ್ಲಿಯೇ ಹೊರಲಿದ್ದು, ವೇಗಿ ಜಸ್‍ಪ್ರೀತ್ ಬೂಮ್ರಾ ತಂಡವನ್ನು ಸೇರಿಕೊಳ್ಳಲಿದ್ದು, ರೋಹಿತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‍ಗೆ ಸ್ಥಾನ ಕಲ್ಪಿಸಲಾಗುವುದು ಎಂದು ಎಂ.ಎಸ್.ಕೆ. ಪ್ರಸಾದ್ ಮಾಧ್ಯಮದವರಿಗೆ  ತಿಳಿಸಿದ್ದಾರೆ. ಒಂದು ವೇಳೆ ಧೋನಿ ನಿವೃತ್ತಿ ಆದರೆ ಅಭಿಮಾನಿಗಳಿಗೆ ಬೇಸರವಾಗುವುದಂತು ಸುಳ್ಳಲ್ಲ..

Sponsored

Edited By

Manjula M

Reported By

Manjula M

Comments