ಟೀಂ ಇಂಡಿಯಾದ ಗ್ರೇಟೆಸ್ಟ್ ಕ್ರಿಕೆಟಿಗರ ಪತ್ನಿಯರು ಕ್ಲಾಸ್’ಮೆಟ್ಸ್ ಅಂತೆ..!!

01 Feb 2019 4:36 PM | Sports
222 Report

ಟೀಂ ಇಂಡಿಯಾದ ಗ್ರೇಟೆಸ್ಟ್ ಕ್ರಿಕೆಟಿಗರ ಪತ್ನಿಯರು ಕ್ಲಾಸ್ ಮೆಟ್ಸ್ ಅಂತೆ…ಈ ಆಟಗಾರರು ಮೈದಾನಕ್ಕೆ ಇಳಿದರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ..  ಇವರಿಬ್ಬರು ಬೇಕಾದಷ್ಟು ಬಾರಿ ಕ್ರೀಡಾಂಗಣದಲ್ಲಿ, ಕಾರ್ಯಕ್ರಮ, ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.. ಬಾಲ್ಯದಿಂದಲೂ ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಸಿಂಗ್ ರಾವತ್ ಆತ್ಮೀಯರಾಗಿದ್ದರು ಅನ್ನೋದು  ಇದೀಗ ತಿಳಿದುಬಂದಿದೆ.. ಟೀಂ ಇಂಡಿಯಾ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿಯರು ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ಓದಿದ್ದಾರೆ.

ಇಬ್ಬರೂ ಅಸ್ಸಾಂನ ಸೈಂಟ್ ಮೇರಿ ಮಾರ್ಗರಿಟಾ ಶಾಲೆಯಲ್ಲಿ ಇಬ್ಬರು ಓದಿದ್ದಾರೆ. ಈ ಕುರಿತು ಅನುಷ್ಕಾ ಶರ್ಮಾ 2013ರಲ್ಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ...ಸಾಕ್ಷಿ ಮತ್ತು ಅನುಷ್ಕಾ ಶಾಲೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಾಗಿ ಅನುಷ್ಕಾ ಶರ್ಮಾ ಪಿಂಕ್ ಗಾಗ್ರ ಚೊಲಿ ಡ್ರೆಸ್ ಹಾಕಿದ್ದರೆ, ಸಾಕ್ಷಿ ರಾಣಿ ಡ್ರೆಸ್ ಹಾಕಿದ್ದರು. ಈ ಫೋಟೋ ಇದೀಗ ಸಿಕ್ಕಿದೆ.. ಇನ್ನು ಅದೇ ಸ್ಕೂಲಿನ ಗ್ರೂಪ್ ಫೋಟೋ ಸಿಕ್ಕಿದೆ.  ಕ್ರಿಕೆಟ್ ದಿಗ್ಗಜರನ್ನು ಮದುವೆಯಾಗೋ ಮೊದಲೇ ಇವರಿಬ್ಬರೂ ಸ್ಕೂಲ್ ಮೇಟ್ ಆಗಿದ್ದರು. ಇಷ್ಟೇ ಅಲ್ಲ ಇವರಿಬ್ಬರ ಫೋಟೋಗಳು ಈ ಸತ್ಯವನ್ನ ಹೊರಹಾಕಿವೆ.. ಒಟ್ಟಾರೆ ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ನಾಯಕರ ಹೆಂಡತಿಯರು ಕ್ಲಾಸ್’ಮೆಟ್ಸ್ ಅಂದರೆ ನಂಬೋದಕ್ಕೆ ಕಷ್ಟ ಆದರೂ ನಂಬಲೇಬೇಕು.

Edited By

Manjula M

Reported By

Manjula M

Comments