ನಾಲ್ಕನೇ ಏಕದಿನ ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ

31 Jan 2019 12:25 PM | Sports
997 Report

ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾದ ನಾಲ್ಕನೇ ಏಕದಿನ ಪಂದ್ಯ ಇಂದು ನಡೆಯಿತು.. ಅದರಲ್ಲಿ ಟೀಂ ಇಂಡಿಯಾ 8 ವಿಕೆಟ್’ಗಳನ್ನು ನ್ಯೂಜಿಲೆಂಡ್ ಗೆ ಒಪ್ಪಿಸಿ ಸೋಲನ್ನೊಪ್ಪಿಕೊಂಡಿದೆ.. ಟ್ರೆಂಟ್ ಬೌಲ್ಟ್ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಝಿಲೆಂಡ್ ತಂಡ ಭಾರತ ವಿರುದ್ಧದ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಗೆಲುವನ್ನು ಸಾಧಿಸಿದೆ..

ಟಾಸ್ ಗೆದ್ದ ನ್ಯೂಝಿಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು... ಬೌಲ್ಟ್ ಹಾಗೂ ಗ್ರಾಂಡ್‌ಹೊಮ್ಮೆ ದಾಳಿಗೆ ಕಂಗಾಲಾದ ಭಾರತ 30.5 ಓವರ್‌ಗಳಲ್ಲಿ ಕೇವಲ 92 ರನ್‌ಗೆ ಆಲೌಟಾಯಿತು. ಗೆಲ್ಲಲು ಸುಲಭ ಸವಾಲು ಪಡೆದ ನ್ಯೂಝಿಲೆಂಡ್ ತಂಡ 14.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ. ಇನ್ನೂ 212 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ಸಿಕ್ಕಿತ್ತು. ಸರಣಿಯಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದ್ದ ನ್ಯೂಝಿಲೆಂಡ್ ಕೊನೆಗೂ ಗೆಲುವಿನ ಮುಖ ಕಂಡಿದೆ. 10 ಓವರ್‌ಗಳಲ್ಲಿ 26 ರನ್ ನೀಡಿ ಭಾರತದ ಪ್ರಮುಖ 5 ವಿಕೆಟ್‌ಗಳನ್ನು ಉರುಳಿಸಿದ ಬೌಲ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಗೆಲುವನ್ನು ಸಾಧಿಸಿಸುವಲ್ಲಿ ವಿಫಲರಾಗಿದ್ದಾರೆ. ಇನ್ನೂ ಇಂಜುರಿಯಿಂದ ತೃತೀಯ ಪಂದ್ಯ ಮಿಸ್ ಮಾಡಿಕೊಂಡಿದ್ದ ಎಂ.ಎಸ್.ಧೋನಿ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ 4ನೇ ಏಕದಿನ ಪಂದ್ಯದಿಂದಲೂ ಧೋನಿ ಹೊರಗುಳಿದಿದ್ದಾರೆ. ಇದರಿಂದ ಕೊಹ್ಲಿ ಮತ್ತು ಧೋನಿಯ ಅಭಿಮಾನಿಗಳು ಕೊಂಚ ನಿರಾಸೆಯಾಗಿದ್ದರು..

 

Edited By

Manjula M

Reported By

Manjula M

Comments