ಅಮಾನತುಗೊಂಡಿದ್ದ ಪಾಂಡ್ಯ-ರಾಹುಲ್’ಗೆ ರಿಲೀಫ್..!!

25 Jan 2019 1:45 PM | Sports
536 Report

ಹಿಂದಿ ಕಿರುತೆರೆಯಲ್ಲಿ ಪ್ರಸಿದ್ಧ ರಿಯಾಲಿಟಿ ಶೋ ‘ಕಾಫಿ ವಿತ್ ಕರಣ್’ ಸದ್ಯ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಕಾರ್ಯಕ್ರಮದಲ್ಲಿ  ಕ್ರಿಕೆಟ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು. ಶೋ ನಲ್ಲಿ ಮಾತನಾಡುವಾಗ ಈ ಇಬ್ಬರು,  ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕೆ ಬಿಸಿಸಿಐ ಇವರಿಬ್ಬರನ್ನು ತಂಡದಿಂದ ಅಮಾನತು ಮಾಡಿತ್ತು. ಸದ್ಯ ಅಮಾನತನ್ನು ವಾಪಸ್ ಪಡೆಯಲಾಗಿದೆ.ಶೋನಲ್ಲಿ ಕರಣ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಮಹಿಳೆಯರನ್ನು  ನಿಂಧಿಸುವಂತೆ ಮಾತನಾಡಿದಈ ಕ್ರಿಕೆಟರ್’ಗಳ ಮೇಲೆ ತೀವ್ರ ವಿರೋಧ ವ್ಯಕ್ತವಾಯ್ತು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತೆ ಮಾತನಾಡಿದ್ದಾರೆಂದು ಬಿಸಿಸಿಐ ಆಡಳಿತ ಮಂಡಳಿ (COA) ಇಬ್ಬರನ್ನು ಜ.11 ರಂದು ಅಮಾನತು ಮಾಡಲಾಗಿತ್ತು.

ನೂತನ ಅಮಿಕಸ್ ಕ್ಯೂರಿ ಪಿ.ಎಸ್.ನರಸಿಂಗ ಅವರೊಂದಿಗೆ ಗುರುವಾರ ಚರ್ಚಿಸಿದ ಬಿಸಿಸಿಐ ಆಡಳಿತ ಸಮಿತಿ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ, ಅಮಾನತು ಶಿಕ್ಷೆಯನ್ನ ಹಿಂಪೆಡೆಯುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದಂತೆ ಇಬ್ಬರ ವಿರುದ್ಧ ಜ.11 ರಂದು ಹೇರಿದ್ದ ಅಮಾನತು, ವಿಚಾರಣೆ ಪೂರ್ಣಗೊಳ್ಳುವವರೆಗೂ ಹಿಂಪಡೆಯಲಾಗುವುದು ಎಂದು ಸಮಿತಿ ಹೇಳಿದೆ. ಆದರೆ ಈ ಬಗ್ಗೆ ಶೋ ನಡೆಸಿಕೊಡುವ ನಿರ್ಮಾಪಕ ಕರಣ್ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ರಾಹುಲ್ ಮತ್ತು ಪಾಂಡ್ಯ, ತಮ್ಮ ಮೇಲಿನ ಅಮಾನತು ಹಿಂಪಡೆದಿರುವುದರಿಂದ ನಿರಾಳರಾಗಿದ್ದಾರೆ. ಅಲ್ಲದೆ ಆಲ್ರೌಂಡರ್ ಹಾರ್ದಿಕ್, ಕಿವೀಸ್ ಪ್ರವಾಸದಲ್ಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಹಾಗೂ ಕೆ ಎಲ್ ರಾಹುಲ್ ಇಂಡಿಯಾ A ತಂಡವನ್ನು ಸೇರಿಕೊಳ್ಳಲಿದ್ದಾರೆ…

Edited By

Manjula M

Reported By

Manjula M

Comments