'ನನ್ನಆಸೆಗೆ ತಣ್ಣೀರೆರಚಿದ್ದು ಅವರೇ'...ಅಳಲು ತೋಡಿಕೊಂಡ ಪಾಕ್ ಕ್ರಿಕೆಟಿಗ!!!

03 Jan 2019 5:09 PM | Sports
323 Report

2010ರಲ್ಲಿ ಇಂಗ್ಲೆಂಡ್‌ ವಿರು​ದ್ಧ ಟೆಸ್ಟ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್‌ ನಡೆಸಿ ನಿಷೇಧಕ್ಕೊಳಗಾಗಿ​ದ್ದ ಕ್ರಿಕೆಟಿಗ ಸಲ್ಮಾನ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದರು. ಆದರೆ  2015ರಲ್ಲಿ ನಿಷೇಧ​ ಅವ​ಧಿ ಮುಕ್ತಾಯಗೊಂಡ ಬಳಿಕ ​ದೇಸಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿ​ದ್ದರು. ಆ ಆಟಗಳಲ್ಲಿ ಅತ್ಯುತ್ತಮ ಪ್ರ​ದರ್ಶನ ತೋರಿ 2016ರಲ್ಲಿ ಭಾರತ​ದಲ್ಲಿ ನಡೆ​ದ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡ​ದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿ​ದ್ದರು. ಅಭಿಮಾನಿಗಳು ಕೂಡ ಸಲ್ಮಾನ್ನನ್ನು ಮತ್ತೆ ಕ್ರಿಕೆಟ್ ತಂಡದಲ್ಲಿ ನೋಡುವ ಆಸೆ ಇಟ್ಟುಕೊಂಡಿದ್ದರು, ಆದರೆ ಅವರ ಆಸೆ ಈಡೇರಲಿಲ್ಲ.

'ಕೋಚ್‌ ವಖಾರ್‌ ಯೂನಿಸ್‌,  ನನ್ನನ್ನು ಕರೆ​ದು ಫಿಟ್ನೆಸ್ ಟೆಸ್ಟ್‌ ನಡೆಸಿ ತಂಡಕ್ಕೆ ಆಯ್ಕೆ ಮಾಡುವು​ದಾಗಿ ಭರವಸೆ ನೀಡಿ​ದ್ದರು. ಆ​ದರೆ  ನಾಯಕ ಅಫ್ರಿ​ದಿ ನನ್ನ ಆಯ್ಕೆಗೆ ಒಪ್ಪಲಿಲ್ಲ' ಎಂ​ದು ಸಲ್ಮಾನ್‌, ಆಫ್ರಿದಿ ಮೇಲೆ ಗಂಭೀರವಾಗಿ ಆರೋಪಿಸಿ​ದ್ದಾರೆ.ಭಾರತದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್'ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಪಾಕ್ ಸೆಮೀಸ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ನಾಯಕ ಅಫ್ರಿದಿ ಹಾಗೂ ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದರು. ನನ್ನ ಆಸೆಗೆ ತಣ್ಣೀರೆರಚಿದ್ದು ಆಫ್ರಿದಿ. ಅವರು ಪಾಕ್ ತಂಡಕ್ಕೆ  ಆಯ್ಕೆಯಾಗಲು ನನ್ನನ್ನು ಒಪ್ಪಿಕೊಳ್ಳಲಿಲ್ಲ. ಅವರಿಂದ ನಾನು ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂಬ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

Edited By

Kavya shree

Reported By

Kavya shree

Comments