ಕೊಹ್ಲಿ ಯಶಸ್ಸಿನ ಹಿಂದೆ ಇರುವ ಆ ಬೆಡಗಿ ಯಾರು ಗೊತ್ತಾ..!?

23 Aug 2018 11:30 AM | Sports
268 Report

ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲುಂಡಿದ್ದು ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ 203 ರನ್ ಗಳಿಂದ ಇಂಗ್ಲೆಂಡ್ ಸೋಲಿಸಿ ಗೆಲುವಿನ ನಗೆಯನ್ನು ಬೀರಿತ್ತು..

ಪಂದ್ಯದ ಗೆಲುವಿನ ನಂತರ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಯಶಸ್ವಿ ಪ್ರದರ್ಶನಕ್ಕೆ ಕಾರಣ ಯಾರು ಎಂಬುದನ್ನು ತಿಳಿಸಿದ್ದಾರೆ. ಟೀಂ ಇಂಡಿಯಾ ಜಯವನ್ನು ನಾಯಕ ವಿರಾಟ್ ಕೊಹ್ಲಿ ಕೇರಳ ಜನರಿಗೆ ಅರ್ಪಿಸಿದ್ದಾರೆ, ತಮ್ಮ ಅತ್ಯುತ್ತಮ ಪ್ರದರ್ಶನದ ಕ್ರೆಡಿಟ್ ಪತ್ನಿ ಅನುಷ್ಕಾ ಶರ್ಮಾರಿಗೆ ನೀಡಿದ್ದಾರೆ.  ಕೊಹ್ಲಿ ಶತಕ ಸಿಡಿಸಿದ ನಂತರ ಅನುಷ್ಕಾಗೆ ಫ್ಲಾಯಿಂಗ್ ಕಿಸ್ ನೀಡಿದ್ದ ಕೊಹ್ಲಿ, ಪಂದ್ಯ ಮುಗಿಯುತ್ತಿದ್ದಂತೆ ಉತ್ತಮ ಪ್ರದರ್ಶನಕ್ಕೆ ಅನುಷ್ಕಾನೇ ಕಾರಣ ಎಂದು ಪತ್ನಿಯನ್ನು ಹಾಡಿ ಹೊಗಳಿದ್ದಾರೆ.

Edited By

Manjula M

Reported By

Manjula M

Comments