ಎಬಿಡಿ ದಾಖಲೆ ಮುರಿದ ವಿರಾಟ್​ ..!

18 Jul 2018 2:46 PM | Sports
202 Report

ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಲೀಡ್ಸ್​​ ಅಂಗಳದಲ್ಲಿ ದಾಖಲೆಯನ್ನು ಬರೆದಿದ್ದಾರೆ. ಕಡಿಮೆ ಪಂದ್ಯಗಳಲ್ಲಿ ನಾಯಕನಾಗಿ 3000 ರನ್​ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಎಬಿ ಡಿವಿಲಿಯರ್ಸ್​​ ರೆಕಾರ್ಡ್​​ ಅನ್ನು ಮುರಿದಿದ್ದಾರೆ..

ನಿನ್ನೆ ನಡೆದಂತಹ  ಮೂರನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯವು ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಪಡೆದುಕೊಂಡಿತು. ತಂಡದ ನಾಯಕ ವಿರಾಟ್​ ಕೊಹ್ಲಿ, ಬೌನ್ಸಿ ಟ್ರ್ಯಾಕ್​​ನಲ್ಲಿ ಎಚ್ಚರಿಕೆಯ ಆಟ ಆಡಿ ಗಮನವನ್ನು ಸೆಳೆದರು.. ಈ ಪಂದ್ಯದಲ್ಲಿ ಕೊಹ್ಲಿ 12 ರನ್​ ಬಾರಿಸುತ್ತಿದ್ದಂತೆ ಮತ್ತೊಂದು ಹೊಸ ಮೈಲುಗಲ್ಲು ಮುಟ್ಟಿದರು. ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ದಾಖಲೆ ಬರೆದರು.

Edited By

Manjula M

Reported By

Manjula M

Comments