ಅಭಿಮಾನಿಗಳ ದೇಶ ಭಕ್ತಿ ನೋಡಿ ಭಾವುಕರಾದ ವಿರಾಟ್ ಕೊಹ್ಲಿ

17 Jul 2018 5:15 PM | Sports
335 Report

ಇಂದು ಭಾರತ, ಇಂಗ್ಲೆಂಡ್ ವಿರುದ್ಧ ಕೊನೆ ಏಕದಿನ ಪಂದ್ಯ ನಡೆಯಲಿದೆ.. ನಿರ್ಣಾಯಕ ಪಂದ್ಯಕ್ಕೆ ಟೀಂ ಇಂಡಿಯಾ ಈಗಾಗಲೇ ಸಜ್ಜಾಗಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ನಾಯಕರಾದ ವಿರಾಟ್ ಕೊಹ್ಲಿ ಟ್ವೀಟರ್ ಅಭಿಮಾನಿಗಳ ಗಮನವನ್ನು ಸೆಳೆದಿದೆ.

ವಿರಾಟ್ ಕೊಹ್ಲಿ ಪಂದ್ಯ ಆರಂಭಕ್ಕೂ ಮೊದಲೇ ದೇಶಭಕ್ತಿಯ ವಿಡಿಯೋವನ್ನು ಅಧಿಕೃತವಾಗಿ ಟ್ವೀಟರ್ ಅಕೌಂಟ್ ನಲ್ಲಿ ಹಾಕಿದ್ದಾರೆ. ವಿಡಿಯೋದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗ್ತಿದೆ. ಮೈದಾನದಲ್ಲಿದ್ದ ಜನರೆಲ್ಲ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ನೀಡ್ತಿದ್ದಾರೆ. ಈ ವಿಡಿಯೋಗೆ ವಿರಾಟ್ ಕೊಹ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ವಿಡಿಯೋ ಜೊತೆ ಭಾವುಕ ಸಂದೇಶವೊಂದನ್ನು ಕೊಹ್ಲಿ ಟ್ವಿಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿಯಾಗಿದೆ.. ಯಾವುದೇ ಷರತ್ತಿಲ್ಲದೆ ನಿರಂತರವಾಗಿ ನಮಗೆ ಬೆಂಬಲ ನೀಡ್ತಿರುವಂತಹ ನಿಮಗೆ ಧನ್ಯವಾದವನ್ನು ತಿಳಿಸಿದರು. ನಿಮ್ಮ ಈ ಪ್ರೀತಿ ಇನ್ನಷ್ಟು ಕಷ್ಟಪಡಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಕೊಹ್ಲಿ ಟ್ವಿಟ್ ಮೂಲಕ ತಿಳಿಸಿದ್ದಾರೆ.

Edited By

Manjula M

Reported By

Manjula M

Comments

Cancel
Done