ಟೀಂಇಂಡಿಯಾ ಹಾಕಿ ಕೋಚ್ ನಿರಾಸೆಗೊಂಡಿದ್ದೇಕೆ..!?

06 Jul 2018 11:01 AM | Sports
264 Report

ನೆದರ್ಲೆಂಡ್‌ನ ಬ್ರೆಡಾದಲ್ಲಿ ನಡೆದಂತಹ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಎಲ್ಲರಲ್ಲೂ ಸಂತಸವನ್ನು ತಂದಿದೆ ಎಂದು ಕೋಚ್ ಹರೇಂದ್ರ ಸಿಂಗ್ ತಿಳಿಸಿದ್ದಾರೆ. ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನಾವು ಬೆಳ್ಳಿ ಪದಕವನ್ನು ಗೆದ್ದಿದ್ದೇವೆ. ಬೆಳ್ಳಿ ಪದಕ್ಕಿಂತ ಟೂರ್ನಿಯುದ್ದಕ್ಕೂ ತಂಡದ ಪ್ರದರ್ಶನ ನನಗೆ ಹೆಚ್ಚು ಸಂತಸ ತಂದಿದೆ ಎಂದಿದ್ದಾರೆ.

ತಂಡದಲ್ಲಿ ಕೆಲವು ಮಹತ್ವದ ಸಕಾರಾತ್ಮಕವಾದಂತಹ ಬದಲಾವಣೆಗಳಾಗಿವೆ. ಮುಂದಿನ ದಿನಗಳಲ್ಲಿ ಬೆಳ್ಳಿ ಪದಕವನ್ನು ಬಂಗಾರದ ಪದಕವನ್ನಾಗಿಸಲು ಪ್ರಯತ್ನಿಸುತ್ತೇನೆ' ಎಂದು ಕೋಚ್ ಹರೇಂದ್ರ ಸಿಂಗ್ ತಿಳಿಸಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡಂತಹ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲನ್ನು ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪಂದ್ಯ 1-1 ಅಂತರದಿಂದ ಅಂತ್ಯಗೊಂಡಿತ್ತು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೂಲಕವೇ ಫಲಿತಾಂಶ ನಿರ್ಧಾರ ಮಾಡಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾ 3-1 ಅಂತರದಲ್ಲಿ ಗೆಲುವನ್ನು ಸಾಧಿಸಿಕೊಂಡಿತ್ತು.

Edited By

Manjula M

Reported By

Manjula M

Comments