ಖೇಲ್ ರತ್ನಗೆ  ನೀರಜ್ ಚೋಪ್ರಾ ಹೆಸರು ಶಿಫಾರಸ್ಸು

28 Apr 2018 11:46 AM | Sports
452 Report

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ 20 ವರ್ಷದ  ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಶಿಫಾರಸನ್ನು ಮಾಡಿದೆ.

ಇದರ ಜತೆಗೆ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೂ ಶಿಫಾರಸು ಮಾಡಿರುವುದಾಗಿ ಎಎಫ್‌'ಐ ಈಗಾಗಲೇ ತಿಳಿಸಿದೆ. ನೀರಜ್ ಜತೆ ಜಾವೆಲಿನ್ ಥ್ರೋ ಪಟು ಅನ್ನು ರಾಣಿ ಹಾಗೂ 4 ಬಾರಿ ಕಾಮನ್‌'ವೆಲ್ತ್ ಪದಕ ವಿಜೇತ ಡಿಸ್ಕಸ್ ಥ್ರೋ ಪಟು ಸೀಮಾ ಪೂನಿಯಾ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಪಿ.ಟಿ. ಉಷಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಅಥ್ಲೆಟಿಕ್ಸ್ ಸಂಸ್ಥೆ ನಾಮ ನಿರ್ದೇಶನವನ್ನು ಮಾಡಿದೆ ಎಂದು ತಿಳಿಸಲಾಗಿದೆ.

Edited By

Manjula M

Reported By

Manjula M

Comments