ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಯುವಿ

23 Apr 2018 2:57 PM | Sports
607 Report

ಯುವರಾಜ್ ಸಿಂಗ್ ಭಾರತದ ಭರವಸೆಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದರು. 2017ರ ಜೂನ್ ನಲ್ಲಿ ಕೊನೆಯ ಏಕದಿನ ಪಂದ್ಯವನ್ನು ಕೂಡ ಆಡಿದ್ದರು. ಅದಾದ್ಮೇಲೆ ಯುವಿಗೆ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನವೇ ಸಿಕ್ಕಿಲ್ಲ.

ಹಾಗಾಗಿ ಕ್ರಿಕೆಟ್ ನಿಂದ ನಿವೃತ್ತಿ ಪಡೆಯುವ ಬಗ್ಗೆ ಯುವರಾಜ್ ಚಿಂತನೆಯನ್ನು ನಡೆಸುತ್ತಿದ್ದಾರೆ. 2019ರ ವಿಶ್ವಕಪ್ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳೋದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ಅವಕಾಶ ಸಿಕ್ಕಲ್ಲೆಲ್ಲ ಆಡುವುದಾಗಿ ತಿಳಿಸಿದ್ದಾರೆ. ಎರಡು ದಶಕಗಳಿಂದ ಭಾರತ ತಂಡಕ್ಕಾಗಿ ಆಡಿದ್ದು, ಒಂದಲ್ಲ ಒಂದು ದಿನ ನಿವೃತ್ತಿಯಾಗಬೇಕು ಎಂದಿದ್ದಾರೆ ಯುವಿ. ಸದ್ಯ ಐಪಿಎಲ್ ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರ ಯುವಿ ಆಡುತ್ತಿದ್ದಾರೆ. ತಮ್ಮ ತಂಡ ಐಪಿಎಲ್ ಸೆಮಿಫೈನಲ್ ಪ್ರವೇಶಿಸುವ ಗುರಿಯನ್ನು ಕೂಡ ಹೊಂದಿದ್ದಾರೆ.

 

Edited By

Manjula M

Reported By

Manjula M

Comments