ಆರ್.ಸಿ.ಬಿ ಗೆ ಕೈಕೈ ಹಿಸಿಕಿಕೊಳ್ಳುವಂತಾಗಿದೆ. ಕಾರಣ ಏನ್ ಗೊತ್ತಾ?

23 Apr 2018 11:23 AM | Sports
657 Report

ಈ ಸಲ ಕಪ್ ನಮ್ದೆ ಎನ್ನುತ್ತಿದ್ದವರು ಈಗ ಸಿಕ್ಕಾಪಟ್ಟೆ ಯೋಚನೆ ಮಾಡುವಂತಾಗಿದೆ. ಕ್ರಿಕೆಟ್ ಲೋಕದ ಕಲರ್ ಫುಲ್ ಟೂರ್ನಿ ಎಂದೇ ಹೇಳುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 'ಈ ಸಲ ಕಪ್ ನಮ್ದೆ' ರಾಯಲ್ ಚಾಲೆಂಜರ್ಸ್ ಬೆಂಗಳೂರು  ಕೈಕೈ ಹಿಸುಕಿಕೊಳ್ಳುವಂತೆ ಆಗಿದೆ.

ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿರುವ ಕನ್ನಡಿಗರು ಮತ್ತು ಹಿಂದೆ ಆರ್.ಸಿ.ಬಿ.ಯಲ್ಲಿದ್ದ ಆಟಗಾರರು ತಮ್ಮ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಅವರು ಈ ಟೂರ್ನಿಯಲ್ಲಿ ಅತಿವೇಗದ ಅರ್ಧಶತಕವನ್ನು ದಾಖಲಿಸಿದ್ದಾರೆ. ಕ್ರಿಸ್ ಗೇಲ್ ಭರ್ಜರಿ ಶತಕ ಬಾರಿಸಿ ತಮ್ಮನ್ನು ಆಯ್ಕೆ ಮಾಡಿಕೊಳ್ಳದವರಿಗೆ ಟಾಂಗ್ ಕೊಟ್ಟಿದ್ದಾರೆ. ಇವರಿಬ್ಬರು ಪಂಜಾಬ್ ತಂಡದಲ್ಲಿ ಮಿಂಚುತ್ತಿದ್ದಾರೆ.ಇನ್ನು ಶೇನ್ ವಾಟ್ಸನ್ ಚೆನ್ನೈ ತಂಡವನ್ನು ಸೇರಿಕೊಂಡಿದ್ದು, ಈ ಟೂರ್ನಿಯಲ್ಲಿ ಶತಕ ಗಳಿಸಿದ್ದಾರೆ. ಕನ್ನಡಿಗ ಕೆ. ಗೌತಮ್ ರಾಜಸ್ತಾನ ರಾಯಲ್ಸ್ ತಂಡದಲ್ಲಿದ್ದು, ಭರ್ಜರಿ ಬ್ಯಾಟಿಂಗ್ ಅನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆರ್.ಸಿ.ಬಿ. ನಾಯಕ ವಿರಾಟ್ ಕೊಹ್ಲಿ 'ಈ ಸಲ ಕಪ್ ನಮ್ದೇ' ಎನ್ನುತ್ತಿದ್ದಾರೆ. ಅಭಿಮಾನಿಗಳು ಕೂಡ ಅದನ್ನೇ ಹೇಳುತ್ತಿದ್ದಾರೆ. 5 ಪಂದ್ಯಗಳನ್ನಾಡಿರುವ ಆರ್.ಸಿ.ಬಿ. 2 ಪಂದ್ಯಗಳನ್ನು ಜಯಿಸಿ 3 ರಲ್ಲಿ ಸೋಲು ಕಂಡಿದೆ.ಇನ್ನೂ ಮುಂದೆ ಆಡುವ ಪಂದ್ಯಗಳನ್ನು ಯಾವ ರೀತಿ ಆಡುತ್ತಾರೋ ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments

Cancel
Done