ಸಚಿನ್ ಹಾಗೂ ವಿನೋದ್ ಕಾಂಬ್ಳಿ ನಡುವಿನ ಸ್ನೇಹದ ನಂಟು...!!

23 Mar 2018 11:18 AM | Sports
386 Report

ಬಾಲ್ಯ ಸ್ನೇಹಿತರಿಬ್ಬರು ಟೀಮ್ ಇಂಡಿಯಾಗೆ ಆಯ್ಕೆಯಾದ ಬಳಿಕ ಸಚಿನ್ ತೆಂಡೂಲ್ಕರ್ ತಮ್ಮ ಪರ್ಫಾಮೆನ್ಸ್ ಕಾಯ್ದುಕೊಳ್ಳುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರೆ ವಿನೋದ್ ಕಾಂಬ್ಳಿ ಆ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು.

ಈ ಮಧ್ಯೆ ಬಾಲ್ಯ ಸ್ನೇಹಿತ ಸಚಿನ್ ಕುರಿತು ವಿನೋದ್ ಕಾಂಬ್ಳಿ ಆಡಿದ ಮಾತೊಂದು ಇಬ್ಬರ ನಡುವೆ ಕಂದಕ ಸೃಷ್ಟಿಸುವಂತೆ ಮಾಡಿತ್ತು. ಕ್ರಿಕೆಟ್ ಜಗತ್ತಿನಲ್ಲಿ ವಿಫಲತೆ ಕಂಡ ಕಾಂಬ್ಳಿ, ಚಿತ್ರರಂಗಕ್ಕೆ ಕಾಲಿಟ್ಟರೂ ಅಲ್ಲೂ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಈ ಅಂತರದ ನಡುವೆ ಸಚಿನ್ ಹಾಗೂ ವಿನೋದ್ ಕಾಂಬ್ಳಿ ಸ್ನೇಹಿತರು ಇಬ್ಬರ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಯತ್ನಿಸಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದರು. ವಿನೋದ್ ಕಾಂಬ್ಳಿಯ ಪಾರ್ಟಿಯೊಂದರಲ್ಲಿ ಹಳೆ ಸ್ನೇಹಿತರೊಂದಿಗೆ ಸಚಿನ್ ಕಾಣಿಸಿಕೊಂಡಿದ್ದರು. ಈ ಮಧ್ಯೆ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಿನೋದ್ ಕಾಂಬ್ಳಿ, ಸಚಿನ್ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಆಗ ಕಾಂಬ್ಳಿಯನ್ನು ತಡೆದ ಸಚಿನ್ ಆತ್ಮೀಯವಾಗಿ ಅಪ್ಪಿಕೊಂಡಿದ್ದಾರೆ.

Edited By

Shruthi G

Reported By

Madhu shree

Comments