ಐಪಿಎಲ್ ಗೆ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್...!

21 Mar 2018 10:16 AM | Sports
505 Report

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಗಾಗಿ ಹೊಸ ಕೇಶ ವಿನ್ಯಾಸದ ಫೋಟೋವನ್ನು ಕೊಹ್ಲಿ ತನ್ನ ಟ್ವೀಟರ್ ಖಾತೆಗೆ ಹಾಕಿದ್ದಾರೆ.

ಸ್ಟೈಲ್ ಮಾಸ್ಟರ್ ಅಲಿಮ್ ಹಾಕಿಮ್ ಅವರ ಶ್ರೇಷ್ಠ ಕೇಶ ವಿನ್ಯಾಸವಿದು ಎಂಬ ಮಾತನ್ನು ಪ್ರಕಟಿಸಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.  ಆರ್ ಸಿಬಿ ವಿರಾಟ್ ಕೊಹ್ಲಿಯನ್ನು ತಂಡದಲ್ಲೆ ಮುಂದುವರೆಸಿತ್ತು. ಇದಕ್ಕಾಗಿ ಕೊಹ್ಲಿಗೆ ಬರೋಬ್ಬರಿ 17 ಕೋಟಿ ರುಪಾಯಿ ನೀಡಿದೆ. ಏಪ್ರಿಲ್ 7ರಿಂದ ಐಪಿಎಲ್ ಮಹಾ ಸಮರ ಶುರುವಾಗಲಿದೆ.

 

Edited By

Shruthi G

Reported By

Madhu shree

Comments

Cancel
Done