ಬಿಸಿಸಿಐ ನಡೆಗೆ ಬೇಸರಗೊಂಡ ಕಿರಿಯರ ತಂಡದ ಕೋಚ್‌ ದ್ರಾವಿಡ್‌

06 Feb 2018 4:37 PM | Sports
295 Report

ಐಸಿಸಿ ಅಂಡರ್-19 ವಿಶ್ವಕಪ್‌‌ ಗೆದ್ದು ಇತಿಹಾಸ ನಿರ್ಮಿಸಿರುವ ಟೀಂ ಇಂಡಿಯಾಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಿಸಿದ ಬೆನ್ನಲ್ಲೇ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌‌ ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‌ನ ಓವಲ್‌ ಮೈದಾನದಲ್ಲಿ ಫೈನಲ್‌‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೃಥ್ವಿ ಶಾ ಪಡೆ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಫೈನಲ್‌ ಪಂದ್ಯದಲ್ಲಿ ಶಾ ಪಡೆ ಜಯ ದಾಖಲಿಸುತ್ತಿದ್ದಂತೆ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ 50 ಲಕ್ಷ ರೂಪಾಯಿಗಳನ್ನು ಬಿಸಿಸಿಐ ಘೋಷಿಸಿತ್ತು.

ಉಳಿದಂತೆ ಆಟಗಾರರಿಗೆ ತಲಾ 30 ಲಕ್ಷ ರೂಪಾಯಿ ಹಾಗೂ ತಂಡದ ಸಿಬ್ಬಂದಿಗೆ ತಲಾ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿತ್ತು. ಆದ್ರೆ ರಾಹುಲ್‌ ದ್ರಾವಿಡ್‌ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್‌ ಗೆಲುವಿನ ಹಿಂದೆ ಪ್ರತಿಯೊಬ್ಬರ ಶ್ರಮ ಅಡಗಿದೆ. ಆದ್ರೆ ಘೋಷಿಸಿರುವ ಬಹುಮಾನದಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ಎಲ್ಲರಿಗೂ ಒಂದೇ ಸಮನಾಗಿ ನಗದು ಬಹುಮಾನ ಘೋಷಿಸಬೇಕಾಗಿತ್ತು. ತಂಡದ ಗೆಲುವಿಗಾಗಿ ಪ್ರತಿಯೊಬ್ಬರು ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ

Edited By

Shruthi G

Reported By

Madhu shree

Comments