ವಿಶ್ವ ದಾಖಲೆ ಬರೆದ ದಕ್ಷಿಣ ಆಫ್ರಿಕಾ ಆಟಗಾರ ಜೆಪಿ ಡುಮಿನಿ

20 Jan 2018 11:23 AM | Sports
471 Report

ನೈಟ್ಸ್ ತಂಡದ ಸ್ಪಿನ್ನರ್ ಎಡ್ಡಿ ಲೆಯ್ ಓವರ್ ನಲ್ಲಿ ಮೊದಲ 4 ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದರು. 5ನೇ ಎಸೆತದಲ್ಲಿ 2 ರನ್ ಪಡೆದರು. ನಂತರ 6ನೇ ಎಸೆತ ನೋಬಾಲ್ ಆಗಿದ್ದು ಆ ಎಸೆತವನ್ನು ಬೌಂಡರಿ ಸಿಡಿಸಿದರು. ಇದರಿಂದ ಒಟ್ಟಾರೆ 5 ರನ್ ಬಂತು. 6ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಒಟ್ಟಾರೆ 6 ಎಸೆತಗಳಲ್ಲಿ 37 ರನ್ ಸಿಡಿಸಿದರು. ದಕ್ಷಿಣ ಆಫ್ರಿಕಾ ಆಟಗಾರ ಜೆಪಿ ಡುಮಿನಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕೇಪ್ ಕೋಬ್ರಾಸ್ ತಂಡದ ಪರ ಆಡುತ್ತಿರುವ ಡುಮಿನಿ ಕೇವಲ 6 ಎಸೆತಕ್ಕೆ 37 ರನ್ ಸಿಡಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರ ಓವರ್ ಒಂದರಲ್ಲಿ ದಾಖಲಾದ 2ನೇ ಗರಿಷ್ಠ ರನ್ ಇದಾಗಿದೆ. ಈ ಹಿಂದೆ ಬಾಂಗ್ಲಾ ಪ್ರೀಮಿಯರ್ ಲೀಗ್ ನಲ್ಲಿ ಬಾಂಗ್ಲಾದ ಅಲ್ಲಾವುದ್ದೀನ್ ಎಸೆದ ಓವರ್ ನಲ್ಲಿ ಜಿಂಬಾಬ್ವೆಯ ಎಲ್ಟನ್ ಚಿಗುಂಬರ 39 ರನ್ ಸಿಡಿಸಿದ್ದರು. ಇದು ವಿಶ್ವ ದಾಖಲೆಯಾಗಿದೆ.

Edited By

Shruthi G

Reported By

Madhu shree

Comments