ನನ್ನ ಜೊತೆ ಹೋಲಿಕೆ ಮಾಡಲು ಪಾಂಡ್ಯ ಯಾವುದೇ ಅರ್ಹತೆಯನ್ನು ಹೊಂದಿಲ್ಲ : ಕಪಿಲ್ ದೇವ್

18 Jan 2018 4:14 PM | Sports
240 Report

ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಂಡ್ಯ ಸಿಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ. ಹೀಗಾಗಿ ನನ್ನ ಜೊತೆ ಹೋಲಿಕೆ ಮಾಡಲು ಪಾಂಡ್ಯ ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ತಿಳಿಸಿದರು. ಯುವ ಆಟಗಾರ ಪಾಂಡ್ಯ ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದ್ದಾರೆ. ಆದರೆ ಅವರು ಮೈದಾನದಲ್ಲಿ ಮಾನಸಿಕವಾಗಿ ಸದೃಢಗೊಳ್ಳಬೇಕಿದೆ ಕಪಿಲ್ ದೇವ್ ಎಂದು ಹೇಳಿದ್ದಾರೆ.

ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಪಾಂಡ್ಯ ಬ್ಯಾಟಿಂಗ್ ಮಾಡಲು ಬಂದಾಗ ಟೀಂ ಇಂಡಿಯಾ ಐದು ವಿಕೆಟ್ ಕಳೆದು ಕೊಂಡು 65 ರನ್ ಗಳಿಸಿತ್ತು. ಈ ವೇಳೆ ಲುಂಗಿ ಎನ್‍ಗಿಡಿ ಅವರ ಬೌಲಿಂಗ್ ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ನಂತರ ಉತ್ತಮ ಪ್ರದರ್ಶನ ನೀಡಿದ್ದ ಪಾಂಡ್ಯರನ್ನು, ಭಾರತದ ತಂಡದ ಮಾಜಿ ಅಲ್‍ರೌಂಡರ್ ಕಪಿಲ್ ದೇವ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಕುರಿತು ಸಂದೀಪ್ ಪಾಟೇಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ಕಪಿಲ್ ಅವರ ಜೊತೆ ಹಲವು ಪಂದ್ಯಗಳನ್ನು ಆಡಿದ್ದೇನೆ. ಕಪಿಲ್ ಟೀಂ ಇಂಡಿಯಾ ಪರ 15 ವರ್ಷಗಳ ಕಾಲ ಆಡಿದ್ದಾರೆ. ಪಾಂಡ್ಯ ಅವರ ವೃತ್ತಿ ಜೀವನದ ಆರಂಭದಲ್ಲಿದ್ದಾರೆ. ಅವರು ಇನ್ನು ಬಹಳ ದಿನಗಳ ಕಾಲ ಕ್ರಿಕೆಟ್ ಆಡಬೇಕಿದೆ. ಹೀಗಾಗಿ ಅವರನ್ನು ಕಪಿಲ್ ದೇವ್ ಆವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

Edited By

Shruthi G

Reported By

Madhu shree

Comments