ಸೌಟು ಹಿಡಿದು ಅಡುಗೆ ಮಾಡೋಕು ಸೈ ಮಾಸ್ಟರ್ ಬ್ಲಾಸ್ಟರ್ ಸಚಿನ್

03 Jan 2018 11:35 AM | Sports
443 Report

ಕ್ರಿಕೆಟ್ ದಂತಕಥೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಅಬ್ಬರಿಸಿದ್ದನ್ನು ನೋಡಿದ್ದೇವೆ. ಇದೀಗ ಅವರು ತಮ್ಮ ಕುಟುಂಬದವರಿಗಾಗಿ ಸೌಟು ಹಿಡಿದು ಬಾಣಸಿಗರಾಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಚಿನ್ ತೆಂಡೂಲ್ಕರ್ ತಮ್ಮ ಮನೆಯಲ್ಲಿ ಕುಟುಂಬದವರು ಹಾಗೂ ಸ್ನೇಹಿತರಿಗಾಗಿ ಅಡುಗೆ ತಯಾರಿ ಮಾಡಿದ್ದಾರೆ.

ಸಚಿನ್ ತಮಗೆ ಇಷ್ಟವಾದ ಅಡುಗೆಯನ್ನು ಮಾಡಿ ಎಲ್ಲರಿಗೂ ಬಡಿಸಿ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. ಸ್ವತಃ ಇದನ್ನು ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

Edited By

Suresh M

Reported By

Madhu shree

Comments