ಶಿಖರ್ ಧವನ್ ಮೊದಲ ಟೆಸ್ಟ್ ಪಂದ್ಯ ಆಡುವುದು ಡೌಟ್

28 Dec 2017 1:41 PM | Sports
454 Report

ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದು ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ. ಶಿಖರ್ ಧವನ್ ಟೀಂ ಹೋಟೆಲ್ ಗೆ ಆಗಮಿಸುವ ವೇಳೆ ಎಡ ಮೊಣಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಆಗಮಿಸಿದರು.

ಫಿಸಿಯೋ ಪ್ಯಾಟ್ರಿಕ್ ಫರ್ಹಾಟ್ ಜತೆಗೂಡಿ ಆಗಮಿಸಿದ್ದು ಬಳಿಕ ಎಂಆರ್‌ಐ ಸ್ಕ್ಯಾನ್ ಗೂ ಒಳಗಾದರು. ಜನವರಿ 5ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು ಈ ಪಂದ್ಯದಲ್ಲಿ ಶಿಖರ್ ಧವನ್ ಲಭ್ಯರಾಗುವುದು ಅನುಮಾನ ಮೂಡಿಸಿದೆ.

 

Edited By

Suresh M

Reported By

Madhu shree

Comments