ರಾಹುಲ್ ದ್ರಾವಿಡ್ ಮತ್ತು ಧೋನಿ ವಿರುದ್ಧ ಶ್ರೀಶಾಂತ್ ಅಸಮಾಧಾನ

07 Nov 2017 10:34 AM | Sports
339 Report

ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದ ಧೋನಿಯವರಿಗೆ ಭಾವನಾತ್ಮಕ ಸಂದೇಶ ರವಾನೆ ಮಾಡಿದ್ರೂ ಯಾವುದೇ ಉತ್ತರ ಸಿಗಲಿಲ್ಲ ಎಂದು ಶ್ರೀಶಾಂತ್ ಆರೋಪಿಸಿದ್ದಾರೆ, ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿದ್ದ ರಾಹುಲ್ ದ್ರಾವಿಡ್ ಗೆ ನನ್ನ ಪರ ನಿಲ್ಲುವಂತೆ ಮನವಿ ಮಾಡಿಕೊಂಡರೂ ಅವರು ಸಹಾಯ ಮಾಡಲಿಲ್ಲ ಎಂದು ದೂರಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದಿಂದ ನಿಷೇಧ ಎದುರಿಸುತ್ತಿರುವ ಎನ್. ಶ್ರೀಶಾಂತ್ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಹಾಗೂ ಎಂ.ಎಸ್.ಧೋನಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ನನಗೆ ಅಗತ್ಯವಿದ್ದಾಗ ನಾಯಕರುಗಳಿಂದ ನೆರವು ಸಿಗಲಿಲ್ಲ. ಫಿಕ್ಸಿಂಗ್ ವೇಳೆ ಟೀಂ ಇಂಡಿಯಾದ ಟಾಪ್ 10ರಲ್ಲಿದ್ದ ಆರು ಕ್ರಿಕೆಟರ್ಸ್ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಆದರೆ ಭಾರತೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರುವ ಕಾರಣ ಆಟಗಾರರ ಹೆಸರನ್ನು ಬಹಿರಂಗಗೊಳಿಸದಂತೆ ಬಿಸಿಸಿಐ ಮನವಿ ಮಾಡಿಕೊಂಡಿತ್ತು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೇ. ನನ್ನ ವಿರುದ್ಧ ಕ್ರಮಕ್ಕೆ ಮುಂದಾದ ಬಿಸಿಸಿಐ, ಅವರ ಬೆನ್ನಿಗೆ ನಿಂತಿದ್ಯಾಕೆ ಎಂದು ಶ್ರೀಶಾಂತ್ ಪ್ರಶ್ನಿಸಿದ್ದಾರೆ.

Edited By

Hema Latha

Reported By

Madhu shree

Comments