ಕೊಹ್ಲಿ ವಾಕಿ ಟಾಕಿ ಬಳಸಿದಾದರೂ ಯಾಕೆ ?

02 Nov 2017 3:54 PM | Sports
239 Report

ಡಗೌಟ್ನಲ್ಲಿ ಸಹ ಆಟಗಾರರೊಂದಿಗೆ ಕುಳಿತುಕೊಂಡಿದ್ದ ವಿರಾಟ್ ಕೊಹ್ಲಿ ವೈರ್ಲೆಸ್ ಉಪಕರಣದಲ್ಲಿ ಪೆವಿಲಿಯನ್ಗೆ ಸಂಪರ್ಕ ಮಾಡುತ್ತಿದ್ದರು. ಇದು ಟಿ.ವಿಯಲ್ಲಿ ಪ್ರಸಾರವಾಗಿತ್ತು. ಅಲ್ಲದೆ ವಿರಾಟ್ ಕೊಹ್ಲಿ ವಾಕಿ-ಟಾಕಿ ಬಳಕೆ ಮಾಡುವ ಮೂಲಕ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಸರು ಹೇಳಲು ಇಚ್ಚಿಸಿದ ಐಸಿಸಿ ಅಧಿಕಾರಿಯೊಬ್ಬರು, ಪಂದ್ಯದ ವೇಳೆ ಅಂಪೈರ್, ಮ್ಯಾಚ್ ರೆಫರಿ ಮತ್ತು ಆಟಗಾರರು ವಾಕಿ-ಟಾಕಿ ಬಳಕೆ ಮಾಡಬಹುದಾಗಿದೆ. ವಿರಾಟ್ ಕೊಹ್ಲಿಯವರು ವಾಕಿ-ಟಾಕಿ ಬಳಸಲು ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕ ಮತ್ತು ಬಿಸಿಸಿಐಯಿಂದ ಈ ಮೊದಲೇ ಅನುಮತಿ ಪಡೆದಿದ್ದರು ಎಂದು ಪಿಟಿಐ ತಿಳಿಸಿದ್ದಾರೆ. ನಿನ್ನೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 53 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Edited By

Hema Latha

Reported By

Madhu shree

Comments