ಸಿಲಿಕಾನ್ ಸಿಟಯಲ್ಲಿ ಕೆಪಿಎಲ್ ಹರಾಜು

06 Aug 2017 3:56 PM | Sports
1053 Report

ಬೆಂಗಳೂರು: ಆರನೇ ಆವೃತ್ತಿ ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್ ) ಹರಾಜು ಬೆಂಗಳೂರಿನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. . ಇವತ್ತು ಬೆಳಿಗ್ಗೆ ಹರಾಜು ಪ್ರಕ್ರಿಯೆ ಆರಂಭವಾಗಿ, ನಿರೂಪಕ ಚಾರು ಶರ್ಮ ಕಾರ್ಯಕ್ರಮ ನೆರವೇರಿಸಲಿದ್ದಾರೆ. 215 ಆಟಗಾರರು, 7 ಫ್ರಾಂಚೈಸಿಗಳು ಕೆಪಿಎಲ್ ಹರಾಜಿನ ಮುಖ್ಯ ಆಕರ್ಷಣೆಯಾಗಿದ್ದಾರೆ . ಈ ಬಾರಿಯೂ ಮಂಗಳೂರು ಯುನೈಟೆಡ್ ಹಾಗೂ ಕಿಚ್ಚ ಸುದೀಪ್ ತಂಡ ಭಾಗವಹಿಸುತ್ತಿಲ್ಲ.


ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಕ್ರಮವಾಗಿ ಎ ಹಾಗೂ ಬಿ ಗುಂಪುಗಳಲ್ಲಿ ಪ್ರತ್ಯೇಕಿಸಲಾಗಿದೆ. ಎ ಗುಂಪಿನಲ್ಲಿ ಅಂತರಾಷ್ಟ್ರೀಯ ಪಂದ್ಯವನ್ನಾಡಿದ, ಐಪಿಎಲ್ ಕೂಟಗಳಲ್ಲಿ ಭಾಗವಹಿಸಿದ ತಾರಾ ಆಟಗಾರರು ಇರಲಿದ್ದಾರೆ. ಬಿ ಗುಂಪಿನಲ್ಲಿ ಕೆಎಸ್ ಸಿಎ ಕೂಟಗಳಲ್ಲಿ ಭಾಗವಹಿಸದ ಕ್ರಿಕೆಟಿಗರಿದ್ದಾರೆ.

ಒಂದು ತಂಡಕ್ಕೆ ಕನಿಷ್ಟ 15 ರಿಂದ ಹಾಗೂ 18 ಮಂದಿಯನ್ನು ಹೊಂದಲು ಅವಕಾಶವಿದೆ. ತಮ್ಮ ಜಿಲ್ಲೆಯ ಇಬ್ಬರು ಸ್ಥಳೀಯ  ಆಟಗಾರರನ್ನು ಸೇರಿಸಿಕೊಳ್ಳಲೇಬೇಕು ಎನ್ನುವ ನಿಯಮ ಇದೆ. ಎ ಗುಂಪಿನಲ್ಲಿವ ಆಟಗಾರರು ಕನಿಷ್ಠ 50 ಸಾವಿರ ರೂ ಮೂಲ ಬೆಲೆ ಹೊಂದಿರುತ್ತಾರೆ. ಒಂದು ತಂಡ ಗರಿಷ್ಠ 30 ಲಕ್ಷ ರೂ.ಗಳನ್ನು ಆಟಗಾರರ ಖರೀದಿಗೆ ಬಳಸಬಹುದು. ಎ ಗುಂಪಿನಲ್ಲಿರುವ ಆಟಗಾರರಿಗಾಗಿ ಫ್ರಾಂಚೈಸಿಯೊಂದು ಗರಿಷ್ಠ 18 ಲಕ್ಷ ರೂ. ಬಿ ಗುಂಪಿನಲ್ಲಿರುವ ಆಟಗಾರರಿಗಾಗಿ ಗರಿಷ್ಠ 12 ಲಕ್ಷ ರೂ ವ್ಯಯಿಸಬಹುದು. ಈ ಬಾರಿ ಹರಾಜಿಗೆ ಗರಿಷ್ಠ ಮಹತ್ವ ಬಂದಿದೆ.

 

Edited By

venki swamy

Reported By

Sudha Ujja

Comments