ಯುವರಾಜ್ –ಕೊಹ್ಲಿ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ

03 Jul 2017 11:03 AM | Sports
453 Report

ನವದೆಹಲಿ: ಚಾಂಪಿಯನ್ಸ್ ಟ್ರೋಫಿ 2017 ಫೈನಲ್ ಪಂದ್ಯದದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಗಳಾದ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದರು ಎಂದು ಕೇಂದ್ರ ಸಚಿವ ರಾಮದಾಸ್ ಅಥವಾಲೆ ಗಂಭೀರ ಆರೋಪ ಮಾಡಿದ್ದಾರೆ.

ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದಲ್ಲಿ ಇವರಿಬ್ಬರೂ ಬ್ಯಾಟ್ಸ್ ಮನ್ ಗಳು ಕಳಪೆ ಮೊತ್ತಕ್ಕೆ ಔಟಾಗಿದ್ದರು. 2009 ರ ಟಿ 20 ವಿಶ್ವಕಪ್ ಪಂದ್ಯವಾದ ಮೇಲೆ ಸ್ವಲ್ಪವೂ ಸುಧಾರಿತ ಪ್ರದರ್ಶನ ತೋರದ ಪಾಕಿಸ್ತಾನ ಇದ್ದಕ್ಕಿದ್ದಂತೆ ಭಾರತದ ವಿರುದ್ಧ ಆ ಮಟ್ಟಕ್ಕೆ ಆಡಲು ಸಾಧ್ಯವಾಗಿದ್ದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

ಯುವರಾಜ್ ಸಿಂಗ್ ಮತ್ತು ಕೊಹ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದವರು. ಆ ಪಂದ್ಯದಲ್ಲಿ ಮಾತ್ರ ಅಂತಹ ಸನ್ನಿವೇಶದಲ್ಲಿ ಕಳಪೆ ಮೊತ್ತಕ್ಕೆ ಹೇಗೆ ವಿಕೆಟ್ ಒಪ್ಪಿಸಿದರು? ಇದೆಲ್ಲದರ ಬಗ್ಗೆ ತನಿಖೆಯಾಗಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

Edited By

venki swamy

Reported By

Sudha Ujja

Comments