ಹಾಕಿ ಲೀಗ್, ಇಂದು ಭಾರತ-ಪಾಕ್ ಹಣಾಹಣಿ

24 Jun 2017 11:22 AM | Sports
411 Report

ಲಂಡನ್: ವಿಶ್ವ ಹಾಕಿ ಲೀಗ್ ಸೆಮಿಫೈನಲ್ ನ ಐದರಿಂದ ಎಂಟರವರೆಗಿನ ಸ್ಥಾನಕ್ಕಾಗಿ ತಂಡಗಳನ್ನು ವಿಂಗಡಿಸುವ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಲಿದೆ. ಮೊದಲ ಮೂರು ಪಂದ್ಯಗಳನ್ನು ಗೆದ್ದು ಭರವಸೆಯಲ್ಲಿದ್ದ ಭಾರತ ತಂಡ ಗುಂಪು ಹಂತದ ಕೊನೆಯ ಪಂದ್ಯದಲ್ಲಿ 1- ರಿಂದ 3 ನೆದರ್ಲೆಡ್ಸ್ ವಿರುದ್ಧ ಸೋಲು ಅನುಭವಿಸಿತ್ತು.

ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೋತು ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ಕೊನೆಯ ಪಂದ್ಯ ದಲ್ಲಿ ಪಾಕಿಸ್ತಾನವನ್ನುಮಣಿಸಿ ಗೌರವ ಉಳಿಸಿಕೊಳ್ಳಲು ತಂಡ ಪ್ರಯತ್ನಿಸಲಿದೆ. ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಗೆದ್ದರೆ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಐದನೇ ಸ್ಥಾನಕ್ಕಾಗಿ ಸೆಣಸುವ ಅವಕಾಶ ಭಾರತಕ್ಕೆ ಲಭಿಸಲಿದೆ.

Edited By

venki swamy

Reported By

Sudha Ujja

Comments