ಭಾರತ v/s ಶ್ರೀಲಂಕಾ ಪಂದ್ಯದ ವೇಳೆ ಏನಾಗಲಿದೆ!? ಫ್ಯಾನ್ಸ್ ಗೆ ಕಹಿ ಸುದ್ದಿ

07 Jun 2017 5:18 PM | Sports
316 Report

ಲಂಡನ್: ಚಾಂಪಿಯನ್ಸ್ ಟ್ರೋಫಿ 2017ರ ಮುಂದಿನ ಪಂದ್ಯ ಭಾರತ ಹಾಗೂ ಶ್ರೀಲಂಕಾ ಮಧ್ಯೆ ನಡೆಯಲಿದೆ. ಜೂನ್ ೮ ರಂದು (ನಾಳೆ) ಭಾರತ ಹಾಗೂ ಶ್ರೀಲಂಕಾ ತಂಡಗಳು ಹಣಾಹಣಿ ನಡೆಸಲಿವೆ. ಆದರೆ ಇದಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೊಂದು ಕಹಿ ಸುದ್ದಿ ಕೇಳಿ ಬಂದಿದೆ.  ಹವಾಮಾನ ಇಲಾಖೆ ವರದಿ ಪ್ರಕಾರ, ಭಾರತ-ಶ್ರೀಲಂಕಾ ಪಂದ್ಯ ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆ ಮಳೆಯಿಂದಾಗಿ ಮ್ಯಾಚ್ ನ್ನು ೪-೫ ಬಾರಿ ನಿಲ್ಲಿಸಲಾಗಿತ್ತು. ಅದರಂತೆ ಶ್ರೀಲಂಕಾ v/s ಭಾರತ ಪಂದ್ಯದ ವೇಳೆ ಭಾರಿ ಮಳೆಯಾಗಲಿದ್ದು, ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಹೀಗಾದಲ್ಲಿ, ಎರಡು ತಂಡಗಳಿಗೆ ತಲಾ 1-1 ಅಂಕಗಳನ್ನು ಹಂಚಲಾಗುತ್ತದೆ.

Edited By

venki swamy

Reported By

Sudha Ujja

Comments