ಕೋಚ್ ಹುದ್ದೆಗೆ ಅರ್ಜಿ ಹಾಕಿದ ಅನಿಲ್ ಕುಂಬ್ಳೆ

07 Jun 2017 4:10 PM | Sports
389 Report

ನವದೆಹಲಿ: 'ಟೀಮ್ ಇಂಡಿಯಾ ಕ್ರಿಕೆಟ್ ಗೆ ಹಲವು ಕ್ರಿಕೆಟಿಗರು ಅರ್ಜಿ ಹಾಕಿರುವ ಬೆನ್ನಲ್ಲೇ ಇಂಡಿಯಾ ಕ್ರಿಕೆಟ್ ತಂಡದಪ್ರಸ್ತುತ ತರಬೇತುಗಾರ ಅನಿಲ್ ಕುಂಬ್ಳೆ ಅರ್ಜಿ ಹಾಕಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆದ್ಮೇಲೆ ಅನಿಲ್ ಕುಂಬ್ಳೆ ಕಾಲಾವಧಿ ಮುಕ್ತಾಯಗೊಳ್ಳಲಿದೆ.

ಆದರೆ ಪ್ರಸ್ತುತ ಅನಿಲ್ ಕುಂಬ್ಳೆ ತರಬೇತುದಾರರಾಗಿದ್ದಾರೆ. ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ಮತ್ತೆ ಪ್ರವೇಶ ಮಾಡಲು ಬಯಸಿರುವುದು ಕುತೂಹಲ ಮೂಡಿಸಿದೆ. ಸದ್ಯ ಅನಿಲ್ ಕುಂಬ್ಳೆ ಅಧಿಕೃತವಾಗಿ ಬೋರ್ಡ್ ಗೆ ಅಪ್ಲಿಕೇಶನ್ ಹಾಕಿದ್ದಾರೆ.

ಕೋಚ್ ಹುದ್ದೆಯ ರೇಸ್ ನಲ್ಲಿ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯನ್ ಆಟಗಾರ ಟಾಮ್ ಮೂಡಿ, ಪಾಕಿಸ್ತಾನದ ಮಾಜಿ ತರಬೇತುಗಾರ ರಿಚರ್ಡ್, ದೊಡ್ಡ ಗಣೇಶ್ ಇನ್ನಿತರರು ಸ್ಪರ್ಧೆಯಲ್ಲಿ ಇದ್ದಾರೆ.

Edited By

venki swamy

Reported By

Sudha Ujja

Comments