ಬ್ಯಾಟ್ ಗಾತ್ರದ ನಿಯಮ ತಿದ್ದುಪಡಿಗೆ ಐಸಿಸಿ ಅಸ್ತು

06 Jun 2017 1:24 PM | Sports
389 Report

ಲಂಡನ್: ಅಂತರಾಷ್ಟ್ರೀಯ ಕ್ರಿಕೆಟ್ ನ ನಿಯಮಾವಳಿಗಳಲ್ಲಿ ಐಸಿಸಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಈ  ಹಿಂದೆ ಕ್ರಿಕೆಟ್  ಪಿತಾಮಹಾ ಎಂಸಿಎ ರೂಪಿಸಿದ್ದ ನಿಯಮಾವಳಿಗಳನ್ನು ಜಾರಿಗೆ ತರಲು ನಿರ್ದರಿಸಿದೆ.

ಪ್ರಮುಖವಾಗಿ ಬ್ಯಾಟ್ ಗಾತ್ರ, ರನೌಟ್ ನಿಯಮಾವಳಿ, ಸ್ಟಂಪಿಂಗ್ ನಿಯಮ ಹಾಗೂ ಮೈದಾನದಲ್ಲಿ ಅನುಚಿತವಾಗಿ ವರ್ತಿಸುವ ಆಟಗಾರರನ್ನು ಮೈದಾನದಿಂದ ಹೊರಕಳಿಸುವ ಅಧಿಕಾರವನ್ನು ಅಂಪೈರಗಳಿಗೆ ನೀಡುವ ಬಗ್ಗೆ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ನೂತನ ಶಿಫಾರಸ್ಸಿನ ಪ್ರಕಾರ, ಬ್ಯಾಟ ಗಾತ್ರದಲ್ಲಿ ವ್ಯತ್ಯಾಸವಾಗಲಿದ್ದು, ಅಂಚುಗಳ ದಪ್ಪ ೪೦ ಮಿಲಿ ಮೀಟರ್ ಹಾಗೂ ಬ್ಲೇಡ್ ನ ದಪ್ಪ ೬೭ ಮಿಲಿ ಮೀಟರ್ ಮೀರಬಾರದು ಎಂದು ಶಿಫಾರಸ್ಸು ಮಾಡಲಾಗಿದೆ. ಪ್ರಸ್ತುತ ಹಲವು ಆಟಗಾರರು ೫೦ ಮಿಲಿ ಮೀಟರ್ ಗಾತ್ರದ ಬ್ಯಾಟ್ ಗಳನ್ನು ಬಳಕೆ ಮಾಡುತ್ತಿದ್ದು, ಇನ್ನು ಮುಂದೆ ಬಳಕೆಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಎಂಸಿಎ ಚರ್ಚೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ಕ್ರಿಕೆಟ್ ನಿಯಮಗಳಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ.

Edited By

venki swamy

Reported By

Sudha Ujja

Comments