ಸಲ್ಮಾನ್ ಮದುವೆ ಬಗ್ಗೆ ಭವಿಷ್ಯ ನುಡಿದ ಪುಟ್ಟ ಬಾಲಕ!!

02 Jun 2017 7:13 PM | Sports
420 Report

ಮುಂಬೈ: ಬಾಲಿವುಡ್ ನ ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ? ಎಂದು ಹಲವರು ಯೋಚಿಸುತ್ತಿದ್ದರು.  ಸಲ್ಮಾನ್ ಮದುವೆ ಕುರಿತು ಹಲವು ರೂಮರ್ಸ್ ಕೂಡ ಈ ಹಿಂದೆ ಹರಿದಾಡಿದ್ವು. ಆದರೆ ಸಲ್ಮಾನ್ ಖಾನ್ ಫ್ಯಾನ್ಸ್ ಗಂತೂ ಅವರು ಯಾವಾಗ ಮದುವೆಯಾಗ್ತಾರೆ ಎಂದು ಕುತೂಹಲ ಇದ್ದೇ ಇದೆ.

ಇದೀಗ ಸಲ್ಮಾನ್ ಮದುವೆ ಬಗ್ಗೆ ೫ ವರ್ಷದ ಪುಟ್ಟ ಬಾಲಕ ಭವಿಷ್ಯ ನುಡಿದಿದ್ದಾನೆ. ಜಯೆಶ್ ಕುಮಾರ್ ಎಂಬ ಬಾಲಕ ಸಲ್ಮಾನ್ ಖಾನ್ ಮದುವೆ ಕುರಿತಂತೆ ಭವಿಷ್ಯ ನುಡಿದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಅಂದಹಾಗೆ, ಜಯೆಶ್ ಕುಮಾರ್ ರಿಯಾಲಿಟಿ ಶೋ 'ಸ ರಿ ಗ ಮ ಪಾ' ಲಿಟಲ್ ಚಾಂಪ್ಸ್ ಸ್ಪರ್ಧಾಳು. ಜಯೆಶ್ ನುಡಿಯುವ ಎಲ್ಲಾ ಮಾತುಗಳು ನಿಜವಾಗಿ ಬೀಡುತ್ತವೆ ಎಂದು ಹೇಳಲಾಗುತ್ತದೆ. ಪುಟ್ಟ ಬಾಲಕನನ್ನು ಛೋಟಾ ಭಗವಾನ್ ಅಂತಲೂ ಕರೆಯಲಾಗುತ್ತದೆ.

ಇತ್ತೀಚೆಗೆ ಸಲ್ಮಾನ್ ಖಾನ್  ತಮ್ಮ ಮುಂಬರುವ ‘ಟ್ಯೂಬ್ ಲೈಟ್’ ಚಿತ್ರದ ಪ್ರಚಾರಕ್ಕಾಗಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಆಗಮಿಸಿದ್ರು. ಈ ವೇಳೆ ಜಯಶ್ ಕುಮಾರ್ ಸಲ್ಮಾನ್ ಖಾನ್ ನಟಿಸಿರುವ  ಚಿತ್ರದ ಹಾಡನ್ನು ಹಾಡಿ ಪ್ರದರ್ಶನ ನೀಡಿದ್ರಲ್ಲದೇ, ಅವರ ಮದುವೆ ಯಾವಾಗ ಆಗುತ್ತದೆ ಎಂಬುದರ ಕುರಿತು ಬಹಿರಂಗಪಡಿಸಿದ್ದಾರಂತೆ.

'ಸಲ್ಮಾನ್ ಖಾನ್ ಶೀರ್ಘದಲ್ಲೇ ಮದುವೆಯಾಗ್ತಾರೆ' ಎಂದು ಜಯೆಶ್ ಹೇಳಿದ್ದಾನೆ. ಈ ಪುಟ್ಟ ಬಾಲಕನ ಪ್ರತಿಭೆಗೆ ಮನಸೋತ ಸಲ್ಲು ಜಯೆಶ್ ಕುಮಾರ್ ಬಳಿ ಹೋಗಿ ಆರ್ಶೀವಾದ ಪಡೆದುಕೊಂಡಿದ್ದಾರಂತೆ.

Edited By

venki swamy

Reported By

Sudha Ujja

Comments