ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಇವರೆಲ್ಲ ಏಕಪತ್ನಿ ವ್ರತಸ್ಥರಾ...? - ಸಚಿವ ಸುಧಾಕರ್ ಕಿಡಿ

24 Mar 2021 12:33 PM | Politics
406 Report

ಇವತ್ತು ಯಾರು ಮರ್ಯಾದಾ ಪುರುಷರು, ಶ್ರೀರಾಮ ಚಂದ್ರರು ಎಂದು ಕಾಂಗ್ರೆಸ್, ಜೆಡಿಎಸ್ ನ ಸದಸ್ಯರು ಹೇಳಿಕೊಳ್ತಾ ಇದ್ದಾರೋ.. ರಾಜ್ಯದ ನನ್ನೂ ಸೇರಿ 224 ಶಾಸಕರ ವಿರುದ್ಧವೂ ತನಿಖೆಗೆ ಆಗಲಿದೆ. ಯಾರೂ ಅನೈತಿಕ ಸಂಬಂಧ ಇಲ್ಲವಾ ಅಂತ ತನಿಖೆ ಆಗಲಿ. 225 ಜನರ ನೈತಿಕತೆಯೂ ತನಿಖೆಯಾಗಲಿ. ಯಾರು ಶ್ರೀರಾಮ ಚಂದ್ರ ಅಂತಾನೂ ರಾಜ್ಯದ ಜನರಿಗೆ ಗೊತ್ತಾಗಲಿ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸವಾಲ್ ಹಾಕಿದ್ದಾರೆ.

ಯಾವುದೇ ಧಾರ್ಮಿಕ ಜಾತ್ರೆ, ಸಮಾರಂಭ, ರಾಜಕೀಯ ಕಾರ್ಯಕ್ರಮಗಳಿಗೆ ಒಂದು ತಿಂಗಳು ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳು ಕಷ್ಟವಾಗಲಿವೆ. ಪೂಜ್ಯ ಮಠಮಾನ್ಯಗಳವರು, ದೇವಸ್ಥಾನಗಳ ಪ್ರಮುಖರು ತಮ್ಮ ಸಮುದಾಯಕ್ಕೆ ಸಂದೇಶ ನೀಡಬೇಕು. ಜಾತ್ರೆ ಸಮಾರಂಭಗಳಿಗೆ ಜನರು ಬರದಂತೆ ಮನವಿ ಮಾಡಬೇಕು. ಕೆಲ ಚಲನಚಿತ್ರ ತಾರೆಯರು ಸಿನಿಮಾ ಪ್ರಚಾರಕ್ಕಾಗಿ ಸಾವಿರಾರು ಜನರನ್ನ ಸೇರಿಸಿರೋದನ್ನ ಗಮನಿಸಿದ್ದೇನೆ. ಸ್ಟಾರ್ ನಟರಿಗೂ ಸಾಮಾಜಿಕ ಜವಾಬ್ದಾರಿ ಇದೆ. ನೀವು ಮಾಸ್ಕ್ ಧರಿಸಿ, ನಿಮ್ಮ ಅಭಿಮಾನಿಗಳಿಗೂ ಹೇಳಿ ಎಂದು ಚಲನಚಿತ್ರ ತಾರೆಯರಿಗೆ ಸುಧಾಕರ್ ಮನವಿ ಮಾಡಿಕೊಂಡರು.

ರಾಜ್ಯದಲ್ಲಿ ಲಸಿಕೆ ಕೊರತೆ ಎದುರಾಗಿಲ್ಲ. ನಿನ್ನೆಯಷ್ಟೆ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಜತೆ ಮಾತುಕತೆ ನಡೆಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 4 ಲಕ್ಷ ಡೋಸ್ ಲಸಿಕೆ ಅಗತ್ಯವಿತ್ತು. ವಿತರಣೆ ಮಾಡುವಷ್ಟು ಲಸಿಕೆಯನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ ಎಂದರು.
ಈ ವಾರದ ಅಂತ್ಯಕ್ಕೆ ಕೇಂದ್ರದಿಂದ ಹನ್ನೆರಡೂವರೆ ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ಬರಲಿದೆ. ಕೇಂದ್ರ ಸಚಿವರು ಕರ್ನಾಟಕಕ್ಕೆ ಅಗತ್ಯವಿರುವಷ್ಟು ಕೋವಿಡ್ ಲಸಿಕೆ ನೀಡುವ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಕೊರತೆಯ ಪ್ರಶ್ನೆಯೇ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Edited By

venki swamy

Reported By

venki swamy

Comments