ರಜನಿಕಾಂತ್ ಜೊತೆ ಕಮಲ್ ಹಾಸನ್ ಮೈತ್ರಿ ಸಾಧ್ಯತೆ

16 Dec 2020 11:02 AM | Politics
245 Report

ತಮಿಳುನಾಡು ವಿಧಾನಸಭಾ ಚುನಾವಣೆಯ ತಯಾರಿ ನಡುವೆ ನಟ ಕಮಲ್ ಹಾಸನ್, ನಟ ರಜನಿಕಾಂತ್ ಅವರೊಂದಿಗೆ ಕೈಜೋಡಿಸುವ ಸುಳಿವು ನೀಡಿದ್ದಾರೆ.

ತಮಿಳುನಾಡಿನ ಜನರಿಗೆ ನಮ್ಮ ಮೈತ್ರಿಯಿಂದ ಒಳ್ಳೆಯದಾಗುತ್ತದೆ ಎಂದರೆ ನಾನು ರಜನಿಕಾಂತ್ ಅವರೊಂದಿಗೆ ಕೈಜೋಡಿಸುವ ಆಲೋಚನೆ ಮಾಡುತ್ತೇನೆ ಎಂದು ಪುನರುಚ್ಚರಿಸಿದ್ದಾರೆ. ನಮ್ಮಿಬ್ಬರ ಸಿದ್ಧಾಂತ, ಚಿಂತನೆಗಳು ಹೊಂದಾಣಿಕೆಯಾದರೆ, ಆ ಹೊಂದಾಣಿಕೆ ತಮಿಳುನಾಡಿನ ಜನರಿಗೆ ಸಹಾಯಕ್ಕೆ ಬರುತ್ತದೆ ಎಂದಾದರೆ, ನಾನು ಸಹಕಾರ ನೀಡಲು ಸಿದ್ಧ ಎಂದಿದ್ದಾರೆ.

ತಮಿಳುನಾಡಿನಲ್ಲಿ 1967 ರಿಂದ ಎಐಎಡಿಎಂಕೆ ಮತ್ತು ಡಿಎಂಕೆ ಅಧಿಕಾರಕ್ಕೆ ಬರುತ್ತಿದ್ದು, ಬೇರೆ ಪಕ್ಷಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಮೊದಲಿನಂತಿಲ್ಲ. ಕರುಣಾನಿಧಿ ಮತ್ತು ಜಯಲಲಿತಾ ಅವರಿಲ್ಲದ ಮೊದಲ ವಿಧಾನಸಭೆ ಚುನಾವಣೆ 2021 ರಲ್ಲಿ ನಡೆಯಲಿದ್ದು, ರಜನಿಕಾಂತ್ ಮತ್ತು ಕಮಲಹಾಸನ್ ಮೈತ್ರಿ ಮಾಡಿಕೊಂಡರೆ ತಮಿಳುನಾಡು ರಾಜಕೀಯದ ದಿಕ್ಕು ಬದಲಾಗಬಹುದು ಎಂದು ಹೇಳಲಾಗಿದೆ.

Edited By

venki swamy

Reported By

venki swamy

Comments