ಬಿಬಿಎಂಪಿ ಚುನಾವಣೆ'ಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ

04 Dec 2020 4:24 PM | Politics
211 Report

ರಾಜ್ಯ ರಾಜಧಾನಿಯ ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ನಲ್ಲಿದ್ದಂತ ಪ್ರಕರಣ ಕುರಿತಂತೆ ಇಂದು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ, ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಮೀಸಲಾತಿ ಪ್ರಕಟಿಸಲು 1 ತಿಂಗಳು ಗಡುವು ನೀಡಿದ್ದು, ಮೀಸಲಾತಿ ಪ್ರಕಟಿಸಿದಂತ 6 ವಾರಗಳಲ್ಲಿ ಚುನಾವಣೆ ನಡೆಸಲು ಹಸಿರು ನಿಶಾನೆ ತೋರಿದೆ.

2020 ನ.10ಕ್ಕೆ ಪಾಲಿಕೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಶೀಘ್ರವಾಗಿ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಮಾಜಿ ಪಾಲಿಕೆ ಸದಸ್ಯ ಶಿವರಾಜು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು

ವಾರ್ಡ್​ಗಳ ಸಂಖ್ಯೆ ಹೆಚ್ಚಳ ಮಾಡಬೇಕಾಗಿದೆ ಎಂಬ ಕಾರಣ ನೀಡಿ ಚುನಾವಣೆ ಬೇಡ ಎಂದು ಹೇಳಿತ್ತು. ಇದರಿಂದ ಸರ್ಕಾರದ ವಿರುದ್ಧ ಬೇಸತ್ತಿದ್ದ ಬಿಜೆಪಿ ಕಾರ್ಪೊರೇಟರ್​ಗಳೇ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್​ಗಳಿಗೆ ಹಿಂದೆಯಿಂದ ಸಾಥ್ ಕೊಟ್ಟು ಕೋರ್ಟ್ ಮೆಟ್ಟಿಲೇರೋ ಹಾಗೆ ಮಾಡಿದ್ರು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್​ಗಳ ಜೊತೆ ಗೌಪ್ಯವಾಗಿ ಸಭೆ ಕೂಡಾ ನಡೆಸಿದ್ರು ಎಂಬ ಮಾಹಿತಿ ಲಭ್ಯವಾಗಿದೆ.

Edited By

venki swamy

Reported By

venki swamy

Comments