ವಿಶ್ವ ಸೈಕಲ್ ದಿನದಂದೇ ಬಾಗಿಲು ಮುಚ್ಚಿದ ಅಟ್ಲಾಸ್ ಸೈಕಲ್ ಕಂಪನಿ
ಭಾರತದ ಪ್ರಮುಖ ಬೈಸಿಕಲ್ ಉತ್ಪಾದನಾ ಕಂಪನಿ ಅಟ್ಲಾಸ್ ಸೈಕಲ್ ಆರ್ಥಿಕ ಹಿಂಜರಿತದಿಂದಾಗಿ ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಕೈಗಾರಿಕೆಯನ್ನು ಮುಚ್ಚುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಸುಮಾರು 1000 ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕಾಕತಾಳೀಯ ಎಂಬಂತೆ ವಿಶ್ವ ಬೈಸಿಕಲ್ ದಿನವಾದ ಜೂನ್.3ರಂದೇ ಕಂಪನಿಯು ಈ ವಿಚಾರವನ್ನು ಪ್ರಕಟಿಸಿದೆ.
ಭಾರೀ ನಷ್ಟದ ಕಾರಣ ಕಂಪನಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿ ಉತ್ತರ ಪ್ರದೇಶದ ಘಾಝಿಯಾಬಾದ್‍ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಮುಚ್ಚಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಭಾರತದ ಸೈಕಲ್ ತಯಾರಿಕಾ ಕಂಪೆನಿಯ ಅಂತಿಮ ಘಟಕವೂ ಬಾಗಿಲು ಮುಚ್ಚಿದಂತಾಗಿದೆ.
1951ರಲ್ಲಿ ಸೋನಿಪತ್‍ನಲ್ಲಿ ತಗಡಿನ ಚಪ್ಪರದಲ್ಲಿ ಜಾನಕಿದಾಸ್ ಕಪೂರ್ ಅಟ್ಲಾಸ್ ಸೈಕಲ್ ಇಂಡಸ್ಟ್ರೀಸ್ ಲಿ. ನ ಪ್ರಥಮ ಘಟಕವನ್ನು ಸ್ಥಾಪಿಸಿದ್ದರು. ಒಂದು ವರ್ಷದಲ್ಲಿ ಘಟಕ 25 ಎಕರೆಗೆ ವಿಸ್ತಾರಗೊಂಡಿತ್ತು. ಮೊದಲ ವರ್ಷವೇ 12 ಸಾವಿರ ಸೈಕಲ್ ತಯಾರಿಸಿ ಮಾರಾಟ ಮಾಡಿತ್ತು. 1965ರ ವೇಳೆಗೆ ಭಾರತದ ಅತ್ಯಧಿಕ ಸೈಕಲ್ ಉತ್ಪಾದಿಸುವ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆದಿದ್ದ ಅಟ್ಲಾಸ್ ಕಂಪನಿ 1978ರಲ್ಲಿ ಭಾರತದ ಪ್ರಥಮ ರೇಸಿಂಗ್ ಬೈಸಿಕಲ್ ತಯಾರಿಸಿತ್ತು.
Comments